ಕೂಡಿಗೆ, ಜೂ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾದ ತೆಂಗಿನ ಗಿಡಗಳನ್ನು ರೈತರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಾ. 23 ರಂದು (ಇಂದು) ಕ್ಷೇತ್ರದ ಆವರಣದಲ್ಲಿ ವಿತರಣೆ ಮಾಡಲಿದ್ದಾರೆ
ತೋಟಗಾರಿಕೆ ಇಲಾಖೆ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ರಿಯಾಯಿತಿ ದರದಲ್ಲಿ ಸರಕಾರದ ನಿಗದಿತ ನಿಯಮಗಳ ಅನುಸಾರವಾಗಿ ರೈತರ ಜಮೀನಿನ ದಾಖಲೆಯ ಅಧಾರದ ಮೇಲೆ ನೀಡಲಾಗುವುದು ಎಂದು ಹಾರಂಗಿಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.