ಕುಶಾಲನಗರ, ಜೂ. 22: ಕೂಡಿಗೆ ಸೈನಿಕ ಶಾಲೆಯಲ್ಲಿ 6ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ‘ಮನೆಯಿಂದಲೇ ಯೋಗ’ ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ ಒಂದು ಗಂಟೆ ಕಾಲ ಯೋಗ ಪ್ರದರ್ಶನ ನಡೆಯಿತು. ಸರ್ಕಾರದ ಆಯುಷ್ ಇಲಾಖೆಯು ಹೊರತಂದಿರುವ ಯೋಗದ ದೃಶ್ಯಾವಳಿಯನ್ನು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಬಾರ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ಪಾಲ್ಗೊಂಡಿದ್ದರು.
ಆಯುಷ್ಮಾನ್ ಇಲಾಖೆಯು ನಿಗದಿಪಡಿಸಿರುವ ನಿಯಮದಂತೆ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಡೆಸÀಲಾಯಿತು. ಶಾಲೆಯ ದೈಹಿಕ ಶಿಕ್ಷಕರಾದ ಹವಾಲ್ದಾರ್ ಸಂಜಯ್ ಭಂಡಾರಿ ಅವರು ಯೋಗದ ಆಸನಗಳನ್ನು ಪ್ರದರ್ಶಿಸಿದರು.