ಕರಿಕೆ, ಜೂ. 21: ಮಳೆಗಾಲ ಬಂತೆಂದರೆ ಕೊಡಗಿನಲ್ಲಿ ನೂರಾರು ಜಲಪಾತಗಳು ಮೈದುಂಬಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ಭಾಗಮಂಡಲ-ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲಿ ಮಳೆಗಾಲ ಬಂತೆಂದರೆ ಹತ್ತಾರು ಜಲಪಾತಗಳು ಮೈದುಂಬಿ ನೋಡುಗರ ಕಣ್ಮನ ಸೆಳೆಯುತ್ತವೆ. ಇದೀಗ ಕೊರೊನಾ ಹಿನ್ನೆಲೆ ಕರಿಕೆ ಗಡಿ ಬಂದ್ ಆದ ಕಾರಣ ಕೇರಳದ ಪ್ರವಾಸಿಗರು ವಿರಳವಾಗಿದ್ದು, ಭಾಗಮಂಡಲಕ್ಕೆ ತೆರಳುವ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮಳೆಯ ತೀವ್ರತೆ ಹೆಚ್ಚಾಗಿದ್ದು ಇದರಿಂದ ಜಲಪಾತದ ಸೊಬಗು ಇನ್ನೂ ಹೆಚ್ಚಾಗಿದೆ. - ಸುಧೀರ್