ಮಡಿಕೇರಿ, ಜೂ.21: ಪ್ರಸಕ್ತ(2020-21) ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೋವಿಡ್-19 ರ ಕಾರಣ ವಿಧಿಸಿದ ಲಾಕ್‍ಡೌನ್ ಸಂಬಂಧ ಸಂಕಷ್ಟಕ್ಕೊಳಗಾದ ಹಣ್ಣಿನ ಬೆಳೆಗಳಾದ ಬಾಳೆ ಬೆಳೆಗೆ ಸಂಬಂಧಿಸಿದಂತೆ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರು ಮಾತ್ರ 2020 ಮಾರ್ಚ್ 2ನೇ ವಾರದ ನಂತರದಲ್ಲಿ ಕಟಾವಿಗೆ ಬಂದಿರುವ ಫಸಲುಗಳಿಗೆ ನಷ್ಟ ಪರಿಹಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿಗಳ ಆಯ್ಕೆ ಮತ್ತು ಅರ್ಹತೆ : ಬಾಳೆ ಬೆಳೆಯನ್ನು ಕಡ್ಡಾಯವಾಗಿ 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರು ಮಾತ್ರ ಪರಿಹಾರ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬೆಳೆ ಸಮೀಕ್ಷೆಯಲ್ಲಿ ದಾಖಲಾದ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. 2020ರ ಮಾರ್ಚ್ 2ನೇ ವಾರದ ನಂತರದಲ್ಲಿ ಕಟಾವಿಗೆ ಬಂದಿರುವ ಬಾಳೆ ಬೆಳೆಗಾರರು ಮಾತ್ರ ನಷ್ಟ ಪರಿಹಾರಕ್ಕೆ ಅರ್ಜಿ ನೀಡಲು ಅರ್ಹರಾಗಿರುತ್ತಾರೆ.

ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರ ಪಟ್ಟಿಯನ್ನು ತಾಲೂಕು ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಲಾಗುವುದು. ಸದರಿ ಪಟ್ಟಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಈ ಪಟ್ಟಿಯಲ್ಲಿರುವ ರೈತರು ನಿಗದಿತ ಅರ್ಜಿ ನಮೂನೆ, ಸ್ವಯಂ ಘೋಷಿತ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಪ್ರತಿ ಮತ್ತು ಆರ್‍ಟಿಸಿ ಪ್ರತಿ, ಜಂಟಿ ಖಾತೆಯಾಗಿದ್ದಲ್ಲಿ ಒಪ್ಪಿಗೆ ಪತ್ರ ಪಡೆಯಬೇಕು(ನೋಟರಿ ಅವರಿಂದ), ಆರ್‍ಟಿಸಿದಾರರು ಮರಣ ಹೊಂದಿದಲ್ಲಿ ಅವರ ಕುಟುಂಬದವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಸಹಾಯಧನ ವಿತರಿಸುವುದು. ಈ ದಾಖಲಾತಿಗಳೊಂದಿಗೆ ತಾಲೂಕಿನ ತೋಟಗಾರಿಕೆ ಇಲಾಖಾ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ಫಲಾನುಭವಿಗಳಿಗೆ ಗರಿಷ್ಠ 1 ಹೆ.ಪ್ರದೇಶಕ್ಕೆ ರೂ.15 ಸಾವಿರ ಮೀರದಂತೆ ಅಥವಾ ನಿಗದಿಪಡಿಸಿದ ಬೆಳೆಯ ವಿಸ್ತ್ರೀರ್ಣಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು. ಕನಿಷ್ಟ ಪರಿಹಾರದ ಮೊತ್ತ ರೂ.2 ಸಾವಿರ ನಿಗದಿಪಡಿಸಲಾಗಿದೆ.

ಅರ್ಜಿಯನ್ನು ತಾ. 30 ರೊಳಗೆ ಕಚೇರಿಗೆ ಸಲ್ಲಿಸಬೇಕು. ಬಾಳೆ ಬೆಳೆಗೆ ಪರಿಹಾರಕ್ಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ.) ಮಡಿಕೇರಿ ದೂ.9448336863, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಸೋಮವಾರಪೇಟೆ ದೂ.8553933357 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ.), ಪೊನ್ನಂಪೇಟೆ ದೂ.9448049020 ಇಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.