ಕಡಂಗ, ಜೂ. 22: ಕೊಡಗು ಜಿಲ್ಲಾ ಎಸ್‍ಎಸ್‍ಎಫ್‍ನ ಹೆಲ್ಪ್ ಡೆಸ್ಕ್‍ನ ಅಧೀನದಲ್ಲಿರುವ ‘ಬ್ಲಡ್ ಸೈಬೋ’ ವತಿಯಿಂದ ಕೊಟ್ಟಮುಡಿಯ ಮರ್ಕಝುಲ್ ಹಿದಾಯದಲ್ಲಿ ಮಡಿಕೇರಿ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಸಲಾಯಿತು. ಸುಮಾರು 50ರಷ್ಟು ಕಾರ್ಯಕರ್ತರು ರಕ್ತದಾನ ಮಾಡಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಕೊಡಗು ಜಿಲ್ಲಾ ಎಸ್‍ಎಸ್‍ಎಫ್‍ನ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಮಾತನಾಡಿ ಸಂಘಟನೆಯು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಮಾಜ ಸೇವೆಗೆ ಸನ್ನದ್ಧ ವಾಗಿದ್ದು ಅದಕ್ಕಾಗಿ ಕಾರ್ಯಕರ್ತರನ್ನು ಸದಾ ಸಿದ್ಧಗೊಳಿಸಿದೆ. ರಕ್ತದಾನವು ಬಹಳ ಮಹತ್ವವುಳ್ಳದ್ದಾಗಿದೆ ಕಾರ್ಯಕರ್ತರು ಈ ಕಾರ್ಯದಲ್ಲಿ ಮಾದರಿಯಾಗಿದ್ದಾರೆ.
ರಾಜ್ಯದಾದ್ಯಂತ 166 ಶಿಬಿರ ಗಳನ್ನು ನಡೆಸಿ 15 ಸಾವಿರಕ್ಕಿಂತಲೂ ಹೆಚ್ಚು ರಕ್ತದ ಯೂನಿಟ್‍ಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ನೀಡಿ ಆಸರೆಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಸಂಸ್ಥೆಯ ವ್ಯವಸ್ಥಾಪಕ ಎಸ್‍ಎಸ್‍ಎಫ್‍ನ ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ನಿರ್ವಹಿಸಿದರು.
ಕೊಡಗು ವೈದ್ಯಕೀಯ ಕಾಲೇಜು ವೈದ್ಯಾಧಿಕಾರಿ ಡಾ: ಕರುಂಬಯ್ಯ ಮಾತನಾಡಿ ಎಸ್ಸೆಸ್ಸೆಫ್’ನ ಈ ಕಾರ್ಯಕ್ರಮ ಶ್ಲಾಘನೀಯ; ರಕ್ತದಾನ ಮಾಡುವಲ್ಲಿ ಯುವ ಪೀಳಿಗೆ ಸನ್ನದ್ದವಾಗಿದೆ ಅದಕ್ಕಿರುವ ಅವಕಾಶಗಳನ್ನು ಸಮಾಜ ಮಾಡಿಕೊಡಬೇಕಾಗಿದೆ ಎಂದರು.
ಎಸ್,ವೈ,ಎಸ್ ಕೊಟ್ಟಮುಡಿ ಬ್ರಾಂಚ್ ಅಧ್ಯಕ್ಷ ಅಬ್ದುಲ್ಲ ಸಖಾಫಿ ಪ್ರಾರ್ಥನೆ ನಿರ್ವಹಿಸಿದರು.ಶಾಫಿ ಸಅದಿ ಸೋಮವಾರಪೇಟೆರವರು ಸ್ವಾಗತಿಸಿದರು. -ನೌಫಲ್ ಕಡಂಗ