ಶನಿವಾರಸಂತೆ, ಜೂ. 22: ಕೊಡ್ಲಿಪೇಟೆಯಲ್ಲಿ ತಾ. 19ರಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಬಾಲಕ ಹಿಮವಂತ (13)ನಿಗೆ ಹ್ಯಾಂಡ್‍ಪೋಸ್ಟ್ ಕಡೆಯಿಂದ ಮಧ್ಯಾಹ್ನ 2 ಗಂಟೆಗೆ ಕಾರು (ಕೆಎ-53, ಎನ್-7087) ಡಿಕ್ಕಿಪಡಿಸಿದ ಪರಿಣಾಮ, ಬಾಲಕನ ಕೈ- ಕಾಲಿಗೆ ಗಾಯವಾಗಿದೆ. ಗಾಯಾಳುವನ್ನು ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ರಾಜೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾಲಕನ ಸಂಬಂಧಿ ಎ.ಎಸ್. ಗಣೇಶ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ ಚಾಲಕ ಎಂ.ಡಿ. ಚಂದನ್ ವಿರುದ್ಧ ಪ್ರಕರಣ ದಾಖಲಿಸಿ, ಕಾರನ್ನು ವಶಪಡಿಸಿಕೊಂಡು ಅಪಘಾತ ಪ್ರಕರಣ ದಾಖಲಿಸಿರುತ್ತಾರೆ.