ಗೋಣಿಕೊಪ್ಪ ವರದಿ, ಜೂ. 20 : ತಿತಿಮತಿ ಅರಣ್ಯ ಇಲಾಖೆ, ತಿತಿಮತಿ ಸಂಶೋಧನಾ ವಲಯ ವತಿಯಿಂದ ಮುದ್ದನಹಳ್ಳಿ ಸಮೀಪವಿರುವ ಸಸ್ಯಕ್ಷೇತ್ರದಲ್ಲಿ ಗಿಡ ವಿತರಣೆ ಆರಂಭವಾಗಿದೆ.

ಸಿಲ್ವರ್, ತೇಗ, ಕರಡಿ, ಶ್ರೀಗಂಧ, ನೆಲ್ಲಿ, ಮಹಾಗನಿ, ಬೀಟೆ, ಶಿವಾನಿ, ಹೊಂಗೆ, ಮತ್ತಿ, ಸಂಪಿಗೆ, ದೇವದಾರು, ಅರಳಿ, ಕಾಯ, ನೇರಳೆ, ಹಾಲ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಆಸಕ್ತ ಕೃಷಿಕರಿಗೆ ವಿತರಿಸಲಾಗುತ್ತಿದೆ.

ಸಣ್ಣ ಬಾಸ್ಕೆಟ್‍ನಲ್ಲಿರುವ ಸಸಿಗಳಿಗೆ 1 ರೂ. ದೊಡ್ಡ ಅಳತೆ ಬಾಸ್ಕೆಟ್‍ನ ಗಿಡಗಳಿಗೆ 3 ರೂ. ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಜಿಲ್ಲೆಯ ಯಾವುದೇ ಭಾಗದ ರೈತರು ಗಿಡಗಳನ್ನು ಪಡೆಯಬಹುದಾಗಿದೆ. ಆರ್‍ಟಿಸಿ, ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಪಾಸ್‍ಪೋರ್ಟ್ ಸೈಜ್ ಫೆÇೀಟೋ ದಾಖಲೆ ನೀಡಬೇಕಾಗಿದೆ. ಅವಶ್ಯಕತೆಗೆ ಅನುಗುಣವಾಗಿ ವಿವಿಧ ಜಾತಿಯ ಗಿಡಗಳನ್ನು ಗರಿಷ್ಠ ಮಿತಿ ಇಲ್ಲದೆ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8150806218, 9611272696, 9449933188 ಸಂಪರ್ಕಿಸಲು ತಿತಿಮತಿ ಅರಣ್ಯ ವಲಯ ಕಚೇರಿ ಪ್ರಕಟಣೆ ತಿಳಿಸಿದೆ.