ಮಡಿಕೇರಿ, ಜೂ. 19: ಕೊಡಗಿನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವು ಖಾಸಗಿ ಬಸ್‍ಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ರಾಜ್ಯ ಸಾರಿಗೆ ಬಸ್‍ಗಳನ್ನು ಓಡಿಸದೆ ಖಾಸಗಿ ಬಸ್ ಸಂಚರಿಸದ ಮಾರ್ಗಗಳಲ್ಲಿ ಕಲ್ಪಿಸುವಂತೆ ಕೆಲವರು ಬಸ್ ಮಾಲೀಕರು ಬೇಡಿಕೆ ಇರಿಸಿದ್ದಾರೆ.

ಈ ಸಂಬಂಧ ಖಾಸಗಿ ಬಸ್ ಮಾಲೀಕರಾದ ಬಿ.ಎಂ. ಅಶೋಕ್, ಬಿ.ಬಿ. ಸತೀಶ್ ರೈ, ಎಂ. ನಿರನ್ ನಾಚಪ್ಪ, ಐತಿಚಂಡ ರಂಜು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದೊಂದಿಗೆ, ಖಾಸಗಿ ಬಸ್ ಸಂಚರಿಸುವ ಮಾರ್ಗಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗ ಬದಲಾಯಿಸುವಂತೆ ಗಮನ ಸೆಳೆದು, ಖಾಸಗಿ ಬಸ್‍ಗಳಿಗೆ ಉಂಟಾಗುತ್ತಿರುವ ನಷ್ಟದ ಹೊರೆ ತಪ್ಪಿಸುವಂತೆ ಕೋರಿದ್ದಾರೆ.