ಆನ್ಲೈನ್ ಮೂಲಕ ಜರುಗಿದ ಪೈಪೋಟಿ
ಮಡಿಕೇರಿ, ಜೂ. 19: ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿದ್ದಂಡ ಪೂವಮ್ಮ - ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆ ಈ ಬಾರಿ ಕೊರೊನಾ ಕಾರಣದಿಂದಾಗಿ ವಿಭಿನ್ನವಾಗಿ ಜರುಗಿತು. ಇವರ ಸಂಸಾರಸ್ಥರು ಆಯೋಜಿಸಿಕೊಂಡು ಬರುತ್ತಿರುವ ಈ ಸ್ಪರ್ಧೆ ಈ ವರ್ಷ 12ನೆಯ ವರ್ಷದ್ದಾಗಿದ್ದು, ಇದನ್ನು ಆನ್ಲೈನ್ ಮೂಲಕ ನಡೆಸಲಾಯಿತು. ಹಿರಿಯರು, ಕಿರಿಯರು ಹಾಗೂ ಪುಟಾಣಿಗಳು ಎಂಬ ಮೂರು ವಿಭಾಗದ ಸ್ಪರ್ಧೆಯಲ್ಲಿ ಹಲವಷ್ಟು ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಹಾಡನ್ನು ವೀಡಿಯೋ ಮೂಲಕ ಸಂಘಟಕರಿಗೆ ಕಳುಹಿಸಿಕೊಟ್ಟಿದ್ದರು. ಹಿರಿಯರ ವಿಭಾಗಕ್ಕೆ ಕನ್ನಡ ಚಿತ್ರಗೀತೆ, ಕಿರಿಯರ ವಿಭಾಗಕ್ಕೆ ಸುಗ್ಗಿಹಾಡು ಹಾಗೂ ಪುಟಾಣಿಗಳಿಗೆ ಕೊಡವ ಹಾಡು ಸ್ಪರ್ಧೆಯನ್ನು ನಿಗದಿಪಡಿಸಲಾಗಿತ್ತು. ವಿಜೇತರಾದ ಹಿರಿಯರು ಹಾಗೂ ಕಿರಿಯ ವಿಭಾಗಕ್ಕೆ ಪ್ರಥಮ ರೂ. 3 ಸಾವಿರ, ದ್ವಿತೀಯ ರೂ. 2 ಸಾವಿರ ಹಾಗೂ ತೃತೀಯ ರೂ. 1 ಸಾವಿರ ಮತ್ತು ಪುಟಾಣಿಗಳಿಗೆ ರೂ. 750 ಪ್ರಥಮ, ರೂ. 500 ದ್ವಿತೀಯ ಹಾಗೂ ರೂ. 250ನ್ನು ತೃತೀಯ ಬಹುಮಾನವಾಗಿ ನೀಡಲಾಯಿತು.
ಸ್ಪರ್ಧಾ ವಿಜೇತರು
ಹಿರಿಯರ ವಿಭಾಗ : ಪ್ರಥಮ ಲಿಖಿತ ಬಟ್ಟಿಯಂಡ, ದ್ವಿತೀಯ ಆಯುಷಾ ಎಂ.ಡಿ., ತೃತೀಯ ಅಪರ್ಣ ಭಾರಧ್ವಾಜ್.
ಕಿರಿಯರ ವಿಭಾಗ : ಪ್ರಥಮ ಅನ್ವಿತ್ ಕುಮಾರ್ ಸಿ.ವಿ., ದ್ವಿತೀಯ ಗ್ರನಿತ ಕಾರ್ಯಪ್ಪ ಹಾಗೂ ಸೋನಲ್ ಸೀತಮ್ಮ, ತೃತೀಯ ಅನುಷಾ ಕೆ.ಜಿ.
ಪುಟಾಣಿ ವಿಭಾಗ : ಪ್ರಥಮ ಬೋಪಣ್ಣ ಎಂ.ಸಿ., ದ್ವಿತೀಯ ಸ್ಕಂದ ಮಧುಕರ್ ಭಟ್, ತೃತೀಯ ಮಾದಂಡ ದಿತ್ಯಾ ಕಾವೇರಿ.