ಸುಂಟಿಕೊಪ್ಪ, ಜೂ. 19: ದುಡಿದು ತಂದು ಕುಟುಂಬ ನಿರ್ವಹಣೆ ಮಾಡುತ್ತಿದ್ದ 7ನೇ ಹೊಸಕೋಟೆಯ ರವಿ ಎಲೆಕ್ಟ್ರಿಷಿಯನ್ ವೃತ್ತಿಯಲ್ಲಿ ತನ್ನನು ತೊಡಗಿಸಿಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕಿ ಸಲಹುತ್ತಿದ್ದ ರವಿಗೆ ಕ್ಯಾನ್ಸರ್ ರೋಗ ತಗುಲಿದ್ದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಲಕ್ಷಾಂತ ರೂ ವೆಚ್ಚದಿಂದಾಗಿ ರವಿ ಅವರ ಪತ್ನಿ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿ ಸಲಹುದೇ ಕಷ್ಟವಾಗಿದೆ. ಆಸ್ಪತ್ರೆಯ ಖರ್ಚು ಭರಿಸುವ ಶಕ್ತಿ ಆಕೆಯಲ್ಲಿ ಇಲ್ಲ್ಲವಾಗಿದೆ. ಬಡ ಕುಟುಂಬದ ಆಧಾರ ಸ್ತಂಭವಾದ ರವಿ ಬದುಕಿ ಉಳಿಯಲು ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು, ಸಹಹೃದಯಿಗಳು ಈ ಬಡ ಕುಟುಂಬದ ಕಾರ್ಪೋರೇಶನ್ ಬ್ಯಾಂಕ್ 520101032436080

ಐಎಫ್‍ಸಿ ಕೋಡ್ 0002943 ಖಾತೆಗೆ ಹಣದ ನೆರವು ನೀಡಬಹುದಾಗಿದೆ ಎಂದು ಈ ಬಡ ಕುಟುಂಬವು ಕೋರಿಕೊಂಡಿದೆ.