ಶ್ರೀಮಂಗಲ, ಜೂ. 20: ಕುಟ್ಟ ಕ್ಷೇತ್ರದ ತಾಲೂಕು ಪಂಚಾಯತಿ ಸದಸ್ಯ ಪಲ್ವಿನ್ ಪೂಣಚ್ಚ ಅವರ ಮೇಲೆ ಶ್ರೀಮಂಗಲದ ಐ. ಸಂಜು ಎಂಬವರು ದಬ್ಬೆ ಕತ್ತಿಯಿಂದ ಪ್ರಹಾರ ಮಾಡಿದ್ದು, ಇದನ್ನು ತಡೆಯಲು ಯತ್ನಿಸಿದ ಪಲ್ವಿನ್ ಅವರ ಕೈ ಬೆರಳು ಮತ್ತು ಕಿವಿಯ ಭಾಗಕ್ಕೆ ಗಾಯ ಉಂಟಾಗಿದೆ. ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಈ ಆರೋಪದಡಿ ಸಂಜು ಎಂಬವರ ಮೇಲೆ ಪಲ್ವಿನ್ ಅವರು ಶ್ರೀಮಂಗಲ ಠಾಣೆಯಲ್ಲಿ ಶುಕ್ರವಾರ ಸಂಜೆ ದೂರು ನೀಡಿದ್ದು, ಸಂಜು ಅವರ ಮೇಲೆ 307 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಇದೇ ಘಟನೆಗೆ ಮತ್ತೊಂದು ಕಡೆಯಿಂದಲೂ ಪ್ರತಿದೂರು ದಾಖಲಾಗಿದ್ದು, ಇಬ್ಬರ ವಿರುದ್ಧವೂ ಸೆಕ್ಷನ್ 307ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹಲ್ಲೆಯಿಂದ ಕೈ ಮತ್ತು ಕಿವಿಯ ಸಮೀಪ ಗಾಯವಾಗಿದೆ ಎಂದು ತಮ್ಮ ದೂರಿನಲ್ಲಿ ಪಲ್ವಿನ್ ಪೂಣಚ್ಚ ತಿಳಿಸಿದ್ದು, ಆರೋಪಿ ಸಂಜು ಅವರ ಮೇಲೆ 307 ಸೆಕ್ಷನ್ ಅಡಿ ಎಫ್.ಐ.ಆರ್. ಆಗಿದೆ.

ಆರೋಪಿ ಸಂಜು

ಪತ್ನಿಯಿಂದ ಪ್ರತಿದೂರು

ಆರೋಪಿ ಸಂಜು ಅವರ ಪತ್ನಿ ಗ್ರೇಸಿ ಅವರು ಪ್ರತಿದೂರು ನೀಡಿದ್ದು, ಶುಕ್ರವಾರ ಶ್ರೀಮಂಗಲದಲ್ಲಿರುವ ಸಂಜು ಅವರ ಮನೆಗೆ ಪಲ್ವಿನ್ ಪೂಣಚ್ಚ ಆಗಮಿಸಿ, ಪತಿ ಸಂಜುಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿದ್ದಾರೆ. ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪಲ್ವಿನ್ ಪೂಣಚ್ಚ ಅವರ ಮೇಲೆಯೂ 307 ಸೆಕ್ಷನ್ ಅಡಿ ಎಫ್.ಐ.ಆರ್. ದಾಖಲಾಗಿದೆ. ಉಬಯ ಕಡೆಯ ದೂರಿನಂತೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ರುವುದಾಗಿ ಎಸ್ಪಿ ಡಾ. ಸುಮನ್ ಖಚಿತಪಡಿಸಿದ್ದಾರೆ.

ಕಾಂಗ್ರೆಸ್‍ನಿಂದ

ತಾ. 22ರಂದು ಪ್ರತಿಭಟನೆ

ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಅವರ ಮೇಲೆ ಹಲ್ಲೆ ನಡೆಸಿರುವುದು ವಾಸ್ತವವಾಗಿದೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೆÇಲೀಸ್

(ಮೊದಲ ಪುಟದಿಂದ) ಇಲಾಖೆ ತಾ.ಪಂ. ಸದಸ್ಯನ ಮೇಲೂ 307 ಸೆಕ್ಷನ್‍ನ ಅಡಿ ಎಫ್.ಐ.ಆರ್. ದಾಖಲಿಸಿದೆ, ಇದನ್ನು ಖಂಡಿಸಿ ಸೋಮವಾರ ಶ್ರೀಮಂಗಲ ಪೆÇಲೀಸ್ ಠಾಣೆಯೆದುರು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ.

ಆರೋಪಿ ಸಂಜು ಅವರನ್ನು ಕೂಡಲೇ ಬಂಧಿಸಬೇಕು. ಪಲ್ವಿನ್ ಪೂಣಚ್ಚ ಅವರ ಮೇಲಿನ ದೂರನ್ನು ಕೈಬಿಡಬೇಕು. ಈ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಾಸ್ತವಾಂಶವನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಜಿ.ಪಂ. ಸದಸ್ಯ ಶಿವು ಮಾದಪ್ಪ ಆಗ್ರಹಿಸಿದ್ದಾರೆ.

ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಶಿವು ಮಾದಪ್ಪ ನೇತೃತ್ವದಲ್ಲಿ ಪ್ರಮುಖರು ಉಪ ನಿರೀಕ್ಷಕ ದಿನೇಶ್ ಕುಮಾರ್ ಅವರ ಜೊತೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರೀಕ್ಷಕ ದಿನೇಶ್ ಕುಮಾರ್ ಅವರು, ಕಾನೂನಿನಡಿ ಯಾರು ದೂರು ನೀಡಿದರೂ ಸ್ವೀಕರಿಸಬೇಕಾಗಿದೆ. ದೂರಿನಲ್ಲಿ ನೀಡಿರುವ ಅಪರಾಧ ಆರೋಪದಲ್ಲಿ 307 ಸೆಕ್ಷನ್‍ನಡಿ ಪ್ರಕರಣ ದಾಖಲಿಸಲಾಗಿದೆ ಎಂದರು.

ಈ ಸಂದರ್ಭ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಮಾಜಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮುಕ್ಕಾಟೀರ ಸಂದೀಪ್, ಅಜ್ಜಿಕುಟ್ಟೀರ ಕಾರ್ಯಪ್ಪ, ಕೆ.ಎಂ. ಬಾಲಕೃಷ್ಣ, ಅಪ್ಪಚ್ಚಂಗಡ ಮೋಟಯ್ಯ, ಪೆಮ್ಮಂಡ ರಾಜಕುಶಾಲಪ್ಪ, ಕಾಳಿಮಾಡ ಪ್ರಶಾಂತ್, ಮತ್ರಂಡ ಶರತ್, ಚೇಂದಂಡ ದೀಪಕ್, ಕೋಟ್ರಂಗಡ ರಂಜನ್, ಚೊಟ್ಟೆಯಂಡಮಾಡ ಉದಯ, ಮಾದೀರ ಸುಧಿ ಮತ್ತಿತರು ಇದ್ದರು.