ಸಿದ್ದಾಪುರ, ಜೂ. 18: ನೆಲ್ಲಿಹುದಿಕೇರಿ ಗ್ರಾ.ಪಂ. ತೆರಿಗೆ ಪರಿಷ್ಕರಣೆ ಮಾಡಿ ಹೆಚ್ಚಿನ ದರವನ್ನು ಗ್ರಾಮಸ್ಥರಿಂದ ವಸೂಲಿ ಮಾಡುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಪಿ.ಆರ್. ಭರತ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರವು ಈಗಾಗಲೇ ಗ್ರಾ.ಪಂ.ಗಳಲ್ಲಿ ಕಂದಾಯ ಪರಿಷ್ಕರಣೆ ಮಾಡಲು ಸುತ್ತೋಲೆಯನ್ನು ಹೊರಡಿಸಿದ್ದು, ಈ ಹಿನ್ನೆಲೆ ನೆಲ್ಲಿಹುದಿಕೇರಿ ಗ್ರಾ.ಪಂ. ಬಲಾತ್ಕಾರವಾಗಿ ಕಂದಾಯ ವಸೂಲಾತಿ ಮಾಡುತ್ತಿದೆ. ಈಗಾಗಲೇ ಲಾಕ್‍ಡೌನ್ ಆಗಿ ಬಡಮಂದಿಗೆ ಜೀವನ ಸಾಗಿಸಲು ಕೆಲಸ ಕಾರ್ಯಗಳಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇದನ್ನು ತಿಳಿಯದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಿಂದ ತೆರಿಗೆಯನ್ನು ಪಾವತಿಸುವಂತೆ ಒತ್ತಾಯಿಸುತ್ತಿರುವುದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿ ಜೋಸ್ ಹಾಜರಿದ್ದರು.