ಕೂಡಿಗೆ, ಜೂ. 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಡೈರಿ ಸರ್ಕಲ್, ಕೂಡ್ಲೂರು ಕೈಗಾರಿಕಾ ಪ್ರದೇಶದಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಮಾಸ್ಕ್ ಉಪಯೋಗಿಸದ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ರವಿ, ಅಭಿವೃದ್ಧಿ ಅಧಿಕಾರಿ ಅಯಿಷಾ, ಕರ ವಸೂಲಿಗಾರ ಅವಿನಾಶ್ ಸೇರಿದಂತೆ ಸಿಬ್ಬಂದಿ ಕೂಡುಮಂಗಳೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರಳಿ ಅಂಗಡಿಯವರಿಗೂ ಸೂಚನೆ ನೀಡಿದರು.
ನಂತರ ಕೂಡಿಗೆ ಡೈರಿ ವೃತ್ತದ ಹತ್ತಿರದ ಅಂಗಡಿಗಳಿಗೆ ವಸ್ತು ಖರೀದಿಸಲು ಬಂದ ಗ್ರಾಹಕರಿಗೆ, ದ್ವಿಚಕ್ರ ವಾಹನ ಸವಾರರಿಗೆ, ಬ್ಯಾಂಕ್ ವ್ಯವಹಾರಕ್ಕೆ ಬಂದವರಿಗೆ ಮಾಸ್ಕ್ ಧರಿಸಿ ವ್ಯವಹಾರ ಮಾಡುವ ಬಗ್ಗೆ ಮಾಹಿತಿ ನೀಡಿದರು.