ನಾಪೆÇೀಕ್ಲು, ಜೂ. 18: ನಾಪೆÇೀಕ್ಲು ಗ್ರಾಮದ ಕಲ್ಲುಮೊಟ್ಟೆ ಮತ್ತು ಕಕ್ಕುಂದಕಾಡು ವೆಂಕಟೇಶ್ವರ ದೇವಳಕ್ಕೆ ಹೋಗುವ ರಸ್ತೆಯು ಗುಂಡಿಗಳಿಂದ ಕೂಡಿದ್ದು ಈ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಆದರೆ ಮಳೆಯಿಂದಾಗಿ ಗುಂಡಿಯಲ್ಲಿನ ಮಣ್ಣು ಮೇಲೆ ಬಂದು ಕೆಸರು ತುಂಬಿ ನಡೆಯಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಭಾಗದಲ್ಲಿ 400 ಕ್ಕೂ ಹೆಚ್ಚಿನ ಮನೆಗಳಿದ್ದು ದಿನಂಪ್ರತಿ ಕಾರ್ಮಿಕರು ಮತ್ತು ನಾಗರಿಕರು ಈ ರಸ್ತೆಯಲ್ಲಿ ಕೆಸರಿನಿಂದಾಗಿ ಪರದಾಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಈ ರಸ್ತೆಯನ್ನು ಕೆÀಸರಿನಿಂದ ಮುಕ್ತಗೊಳಿಸಿ ಸಾರ್ವಜನಿಕರಿಗೆ ನಡೆದಾಡಲು ಅನುವು ಮಾಡಿ ಕೊಡಬೇಕೆಂದು ಈ ವಿಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.