ಮಡಿಕೇರಿ, ಜೂ. 18: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ.

ಇತರ ದೇಶ/ರಾಜ್ಯ/ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರ ಪೈಕಿ ಸಂಪರ್ಕ ತಡೆಯಲ್ಲಿರುವ ಜನರ ವಿವರ ಕೆಳಕಂಡಂತಿದೆ.

ಇತರ ದೇಶದ ಜನರು- 9. ಇತರ ರಾಜ್ಯದ ಜನರು-572. ಒಟ್ಟು ಜನರು-581. ಇಲ್ಲಿಯವರೆಗೆ ಒಟ್ಟು 4362 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಪಾಸಿಟಿವ್ ಪ್ರಕರಣಗಳು- 03 (ಒಬ್ಬರು ಗುಣಮುಖರಾಗಿದ್ದಾರೆ). ನೆಗೆಟಿವ್ ವರದಿ ಬಂದ ಪ್ರಕರಣಗಳು-4175. ವರದಿ ನಿರೀಕ್ಷಿತ ಪ್ರಕರಣಗಳು-184. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 43 ಜನರು ದಾಖಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.