ಗೋಣಿಕೊಪ್ಪ ವರದಿ, ಜೂ. 18: ಧನುಗಾಲ ಗ್ರಾಮದಲ್ಲಿ ಬಿತ್ತನೆ ಮಾಡಿದ್ದ ಶುಂಠಿ ಬೆಳೆ ಕಾಡು ಹಂದಿ ದಾಳಿಗೆ ನಾಶವಾಗಿದೆ. 1 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಕೃಷಿಕ ಎಸ್. ಪಿ. ಜಗದೀಶ್ ಎಂಬವರು ಅಂದಾಜು ಅರ್ಧ ಏಕರೆಯಷ್ಟು ಜಾಗದಲ್ಲಿ ಶುಂಠಿ ಕೃಷಿ ಮಾಡಿದ್ದರು. ಸೋಮವಾರ ರಾತ್ರಿ 15 ಕ್ಕೂ ಹೆಚ್ಚು ಹಂದಿಗಳು ದಾಳಿ ಮಾಡಿ, ಉತ್ತು ನಾಶ ಮಾಡಿದೆ. ಚಿಗುರು ಬಂದಿದ್ದ ಬೆಳೆ ಸಂಪೂರ್ಣ ನೆಲ ಕಚ್ಚಿದೆ.

ಸುಮಾರು 60 ಚೀಲ ಶುಂಠಿ ಇಳುವರಿ ತೆಗೆಯುವ ಉತ್ಸಾಹದಲ್ಲಿದ್ದ ಕೃಷಿಕನಿಗೆ ನಿರಾಶೆ ಮೂಡಿಸಿದೆ. ಈ ಸಂಬಂದ ತಿತಿಮತಿ ವಲಯ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಆರ್‍ಎಫ್‍ಒ ಅಶೋಕ್ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.