ಮಡಿಕೇರಿ, ಜೂ. 18: ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಮಾದರಿ ನಿಯಮಗಳು 2016 ನಿಯಮ 87 ರ ಅನ್ವಯ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲ ನ್ಯಾಯ ಮಂಡಳಿಗಳ ಸದಸ್ಯರುಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸ ಬೇಕಿದ್ದು, ಈ ಆಯ್ಕೆ ಸಮಿತಿಯಲ್ಲಿ ನಿಯಮ 87(3) ರನ್ವಯ ಮಕ್ಕಳ ಅಭಿವೃದ್ಧಿ ಅಥವಾ ರಕ್ಷಣೆ ಕ್ಷೇತ್ರದಲ್ಲಿ ಕನಿಷ್ಟ 7 ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರುವ 2 ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳಾಗಿರ ಬೇಕು. ಆದರೆ ಅವರು ಯಾವುದೇ ಮಕ್ಕಳ ಸಂಸ್ಥೆ ನಡೆಸದ ಅಥವಾ ಆಡಳಿತ ಮಾಡದವರಾಗಿರತಕ್ಕದ್ದು, ಕಾರಣ ಇಂತಹ ಅರ್ಹತೆಯುಳ್ಳ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗ ಬಯಸಿದ್ದಲ್ಲಿ ಮನವಿ/ ಅರ್ಜಿಯನ್ನು ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎರಡನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು-560001 ಇವರಿಗೆ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.