ಶನಿವಾರಸಂತೆ, ಜೂ. 17: ಇತ್ತೀಚೆಗೆ ಶನಿವಾರಸಂತೆ ಹೋಬಳಿ ಎಡೇಹಳ್ಳಿ ಗ್ರಾಮದ ಯುವಕ ಸಂಶಯಾಸ್ಪದವಾಗಿ ಮರಣ ಹೊಂದಿದ್ದು ಯುವಕನ ಕುಟುಂಬದವರಿಗೆ ಸಾಂತ್ವಾನ ಹೇಳಿದ ಸಮಾಜ ಸೇವಕ ಸಂಕೇತ್ ಪೂವಯ್ಯ ಅವರು ಮುಂದೆ ಈ ವಿಚಾರವಾಗಿ ಕಾನೂನು ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಜಿಲ್ಲೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪದಿಂದಾಗಿ ಕಾಫಿ, ಮೆಣಸು, ಏಲಕ್ಕಿ, ಭತ್ತ ಬೆಳೆಗಳು ನಾಶವಾಗಿ ಜನರ, ರೈತರ ಜೀವನ ಶೋಚನೀಯ ಸ್ಥಿತಿಯಲ್ಲಿದ್ದು ಇದರ ಬಗ್ಗೆ ಧ್ವನಿಯೆತ್ತಲು ಯಾವ ಜನಪ್ರತಿನಿಧಿಗಳು ಆಸಕ್ತಿ ತೋರದಿರುವುದು ಕೊಡಗಿನ ದುರಂತವೇ ಸರಿ ಎಂದು ಅವರು ಅಭಿಪ್ರಾಯಪಟ್ಟರು.

ಸಂಘಟಿತರಾಗಿ ಈ ಸರಕಾರಗಳ ವಿರುದ್ಧ ಹೋರಾಡಬೇಕೆಂದು ಅವರು ಕರೆ ಕೊಟ್ಟರು. ಈ ಸಂದರ್ಭ ಜೆ.ಡಿ.ಎಸ್. ಜಿಲ್ಲಾ ಕಾರ್ಯದರ್ಶಿ ಆದಿಲ್ ಪಾಶ, ಮುಖಂಡರುಗಳಾದ ಡಿ.ಪಿ. ಬೋಜಪ್ಪ, ಚನ್ನಬಸಪ್ಪ, ಮುತ್ತೇಗೌಡ, ನಾಗರಾಜ್ ಆಚಾರ್, ರಂಗಾಚಾರಿ, ಅಬ್ದುಲ್ ರಜಾಕ್, ಶುಕೂರ್, ಎಸ್.ಕೆ. ಅಪ್ಪಸ್ವಾಮಿ, ಕೋಮಾರಪ್ಪ, ಗಿರೀಶ್, ಚಂದ್ರಣ್ಣ, ರಂಗರಾಜ್, ಅವರೆದಾಳ್ ಪಾಪಣ್ಣ ಮತ್ತಿತರರು ಭಾಗವಹಿಸಿದ್ದರು.