ಮಡಿಕೇರಿ, ಜೂ, 17: ಕೊಡಗು ಜಿಲ್ಲಾ ಜೆ.ಡಿ.ಎಸ್. ವತಿಯಿಂದ ಖಾಸಗಿ ಬಸ್ ನೌಕರರಿಗೆ ಆಹಾರ ಕಿಟ್ಟನ್ನು ವಿತರಿಸಲಾಯಿತು. ನಗರದ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಸುಮಾರು 150 ಮಂದಿಗೆ ಕಿಟ್‍ಅನ್ನು ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕೆ.ಎಂ. ಗಣೇಶ್, ಕೊರೊನಾ ಲಾಕ್‍ಡೌನ್ ನಿಂದಾಗಿ ಖಾಸಗಿ ಬಸ್‍ಗಳ ಸಂಚಾರ ವಿಲ್ಲದೆ ಬಸ್‍ಗಳನ್ನೇ ನಂಬಿಕೊಂಡಿ ರುವ ಖಾಸಗಿ ಬಸ್‍ನ ನೌಕರರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ಜೆ.ಡಿ.ಎಸ್. ವತಿಯಿಂದ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ವೀರಾಜಪೇಟೆ ಹಾಗೂ ಸೋಮವಾರಪೇಟೆ ಭಾಗಗಳಲ್ಲೂ ಕಿಟ್ ವಿತರಿಸಲಾಗುತ್ತದೆ ಎಂದ ಗಣೇಶ್ ಸಂಕಷ್ಟದಲ್ಲಿರುವ ವರನ್ನು ಗುರುತಿಸಿ ನೆರವು ನೀಡುವ ಕಾರ್ಯವನ್ನು ಜೆ.ಡಿ.ಎಸ್. ಮುಂದು ವರೆಸಲಿದೆ ಎಂದು ಹೇಳಿದರು.
ಈ ಸಂದರ್ಭ ಜೆ.ಡಿ.ಎಸ್. ಪದಾಧಿಕಾರಿಗಳಾದ ಮನ್ಸೂರ್ ಆಲಿ, ಇಸಾಕ್ ಖಾನ್, ಶರೀಫ್, ಲೀಲಾ ಶೇಷಮ್ಮ, ರವಿಕಿರಣ್, ರವಿಕುಮಾರ್, ಸೈಫ್‍ಆಲಿ, ಅಜಿತ್, ಸುನಂದ, ಮಮತಾ ಇತರರಿದ್ದರು.