ಮಡಿಕೇರಿ, ಜೂ. 17: ಭಾರತದ ಗಡಿ ಕಾಶ್ಮೀರ ಪ್ರಾಂತದ ಲಡಾಕ್‍ನ ಗಾಲ್ವನ್‍ನಲ್ಲಿ ತಗಾದೆ ತೆಗೆದಿರುವ ಚೀನಾ, 20 ಮಂದಿ ದೇಶದ ಯೋಧರ ಬಲಿದಾನಕ್ಕೆ ಕಾರಣವಾಗುವುದರೊಂದಿಗೆ ಯುದ್ಧೋನ್ಮಾದ ಪರಿಸ್ಥಿತಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿ.ಹಿಂ.ಪ. ಬಜರಂಗದಳ, ಹಿಂಜಾವೇ, ಬಿಜೆಪಿ ಸಹಿತ ಸಂಘ ಪರಿವಾರ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಚೀನಾ ವಿರುದ್ಧ ಪ್ರತಿಭಟನೆಯೊಂದಿಗೆ; ಆದೇಶದ ಉತ್ಪನ್ನಗಳನ್ನು ಭಾರತ ಬಹಿಷ್ಕರಿಸುವ ಮೂಲಕ ಗಡಿ ತಂಟೆ ವಿರುದ್ಧ ತಕ್ಕ ಶಾಸ್ತಿಗೆ ಮುಂದಾಗುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಯಿತು. ಪ್ರತಿಭಟನಾಕಾರರು ಚೀನಾ ದೇಶದ ವಸ್ತುಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಾಶ್ಮೀರ ಪ್ರಾಂತದ ಲಡಾಖ್ ಭೂ ಭಾಗದ ಗೌಹಾನ್‍ನಲ್ಲಿ ಎರಡು ದಿನಗಳ ಹಿಂದೆ ಭಾರತೀಯ ಯೋಧರಾದ ಕರ್ನಲ್ ಸಂತೋಷ್ ಹವಾಲ್ದಾರರುಗಳಾದ ಪಳನಿ ಓಝಾ ಅವರುಗಳ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ ಚೀನೀ ಸೈನಿಕರಿಂದ ಗಾಯಗೊಂಡಿದ್ದ 17 ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ, ಚೀನಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಯಿತು. ಏಕ ಕಾಲಕ್ಕೆ ಚೀನಾ, ಪಾಕಿಸ್ತಾನ, ನೇಪಾಳ ಭಾರತದ ಗಡಿಯಲ್ಲಿ ಅರಾಜಕತೆ ಸೃಷ್ಟಿಸುತ್ತಿರುವುದನ್ನು ಭಾರತವು ರಾಜತಾಂತ್ರಿಕವಾಗಿ ದಿಟ್ಟತನದಿಂದ ಎದುರಿಸಬೇಕೆಂದು ಗಮನ ಸೆಳೆಯಲಾಯಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿ.ಹಿಂ.ಪ,

(ಮೊದಲ ಪುಟದಿಂದ) ಬಜರಂಗದಳ, ಹಿಂದು ಜಾಗರಣ ವೇದಿಕೆ, ಆರ್‍ಎಸ್‍ಎಸ್, ಭಾ.ಜ.ಪಾ. ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಳಿಕ ಹುತಾತ್ಮ ಯುದ್ಧ ಸ್ಮಾರಕವರೆಗೆ ತೆರಳಿ ಮಡಿದ ಯೋಧರಿಗೆ ಮೌನ ಶ್ರದ್ಧಾಂಜಲಿಯೊಂದಿಗೆ ಪುಷÀ್ಪ ನಮನ ಸಲ್ಲಿಸಲಾಯಿತು. ಆ ಮುನ್ನ ಪ್ರತಿಭಟನಾಕಾರರು ಭಾರತದಲ್ಲಿ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದು ಸಾಂಕೇತಿಕವಾಗಿ ಚೀನಾ ದೇಶದ ವಸ್ತುಗಳನ್ನು ಸುಟ್ಟು ಹಾಕಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪ್ರಮುಖ ಚಂದ್ರ ಉಡೋತ್, ಸಂದೇಶ್, ವಿಶ್ವ ಹಿಂದೂ ಪರಿಷತ್ತಿನ ಮಠ ಮಂದಿರ ಪ್ರಮುಖರಾದ ಚಿ.ನಾ. ಸೋಮೇಶ್, ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್, ವಿದ್ಯಾರ್ಥಿ ಪ್ರಮುಖ ವಿನಯ್, ಹಿಂದು ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಭಾ.ಜ.ಪಾ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನು, ಮಂಜುನಾಥ್ ಸೇರಿದಂತೆ ಮಹೇಶ್ ಜೈನಿ, ಅನಿತಾ ಪೂವಯ್ಯ, ಬಿ.ಕೆ. ಅರುಣ್, ಜಗದೀಶ್, ನವೀನ್ ಪೂಜಾರಿ, ಬಜರಂಗದಳದ ಚರಣ್, ದುರ್ಗೇಶ್, ಮತ್ತಿತರರು ಪಾಲ್ಗೊಂಡಿದ್ದರು.

ಕುಶಾಲನಗರ : ಭಾರತದ ಯೋಧರ ಹತ್ಯೆಗೈದ ಚೀನಾ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಕುಶಾಲನಗರದ ದೇಶ್ರಪ್ರೇಮಿಗಳು, ಸಂಘಸಂಸ್ಥೆಗಳ ಪ್ರಮುಖರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಚೀನಾ ವಿರುದ್ಧ ಪ್ರತಿಭಟನೆ ನಡೆಸಿ ಮಡಿದ ಭಾರತೀಯ ಯೋಧರಿಗೆ ಜಯಕಾರ ಹಾಕಿದರು. ಗಣಪತಿ ದೇವಾಲಯದ ಆವರಣದಲ್ಲಿ ದೀಪ ಬೆಳಗಿ ಮೌನಾಚರಣೆ ಮೂಲದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗರಾಜ್, ಚೀನಾ ದೇಶಕ್ಕೆ ಪರೋಕ್ಷ ಹೊಡೆತ ನೀಡಲು ಭಾರತೀಯರು ಚೀನಾ ಉತ್ಪಾದಿತ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಆರ್ಥಿಕವಾಗಿ ಹೊಡೆತ ನೀಡಬೇಕಿದೆ ಎಂದರು.

ಪಪಂ ಸದಸ್ಯರಾದ ಅಮೃತ್ ರಾಜ್, ಕೆ.ಜಿ.ಮನು, ಸಂಘಸಂಸ್ಥೆಗಳ ಪ್ರಮುಖರಾದ ಕುಮಾರಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ, ವರದ, ವಿ.ಡಿ.ಪುಂಡರೀಕಾಕ್ಷ, ಮಂಜುನಾಥ್, ನವನೀತ್, ರಾಮಚಂದ್ರ, ಎಂ.ಎಂ.ಚರಣ್, ಅನೀಶ್, ವೈಶಾಖ್, ಪ್ರವೀಣ್, ಓಬುಳ ರೆಡ್ಡಿ, ರವೀಂದ್ರ ಮತ್ತಿತರರು ಇದ್ದರು.