ಮಡಿಕೇರಿ: ಕರ್ನಾಟಕ ದ.ಸಂ.ಸ.ದಿಂದ ಚೇರಂಬಾಣೆಯಲ್ಲಿನ ನಗರ ಕಾಲೋನಿ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಡಿಎಸ್ಎಸ್ ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್., ಡಿಎಸ್ಎಸ್ ತಾಲೂಕು ಸಂಚಾಲಕ ದೀಪಕ್ ಎ.ಪಿ. ಹಾಜರಿದ್ದರು.
ಈ ಸಂದರ್ಭ ಮಾತನಾಡಿದ ದಿವಾಕರ್ ಲಾಕ್ಡೌನ್ನಿಂದಾಗಿ ಆಹಾರ ಹಾಗೂ ದಿನಬಳಕೆಯ ವಸ್ತುಗಳಿಲ್ಲದೆ ಬಹಳಷ್ಟು ಜನ ಪರಿತಪಿಸುತ್ತಿದ್ದಾರೆ. ಆದ್ದರಿಂದ ಆಹಾರ ಕಿಟ್ ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.ಪಾಲಿಬೆಟ್ಟ: ಶ್ರೀ ರಾಮಕೃಷ್ಣ ಶಾರದಾಶ್ರಮ ಪೆÇನ್ನಂಪೇಟೆ ಇವರ ವತಿಯಿಂದ ಪಾಲಿಬೆಟ್ಟದಲ್ಲಿ 56 ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಉಪಸ್ಥಿತರಿದ್ದರು.