ಸೋಮವಾರಪೇಟೆ, ಜೂ. 16: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಲ್ಲಭಭಾಯಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಪ.ಪಂ. ಕ್ರಮವಹಿಸಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.

ಕಳೆದ ಅನೇಕ ಸಮಯಗಳಿಂದ ದುರಸ್ತಿ ಕಾಣದೇ ಹೊಂಡಾಗುಂಡಿಗಳ ಆಗರವಾಗಿದ್ದ ಈ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದರು. ಇದರೊಂದಿಗೆ ಶಾಸಕ ಅಪ್ಪಚ್ಚು ರಂಜನ್ ಅವರ ಗಮನವನ್ನೂ ಸೆಳೆದಿದ್ದರು.

ಶಾಸಕ ರಂಜನ್ ಅವರ ಸೂಚನೆಯಂತೆ ಇದೀಗ ರಸ್ತೆಯಲ್ಲಿನ ಗುಂಡಿಗಳನ್ನು ಸಿಮೆಂಟ್ ಮಿಶ್ರಿತ ವೆಟ್‍ಮಿಕ್ಸ್ ಹಾಕಿ ಮುಚ್ಚಲಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು, ಡಾಮರೀಕರಣ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಲಾಗಿದೆ. ಬೇಸಿಗೆಯಲ್ಲಿ ರಸ್ತೆ ಡಾಂಬರೀಕರಣಗೊಳಿಸಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹೇಳಿದ್ದಾರೆ.