ಸುಂಟಿಕೊಪ್ಪ, ಜೂ. 16: ಸಮೀಪದ ಕಂಬಿಬಾಣೆ ಗ್ರಾ.ಪಂ.ಯ ಅತ್ತೂರು ನಲ್ಲೂರು ಗ್ರಾಮದ ನಿವಾಸಿ ವಿವಾಹಿತ ಕೂಲಿ ಕಾರ್ಮಿಕ ಹರೀಶ (41) ಎಂಬವರು ರಾತ್ರಿ ವೇಳೆ ಸಮೀಪದ ಕಾಪಿತೋಟದ ಮಾವಿನ ಮರಕ್ಕೆ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾರೆ. ಹರೀಶ್ ಮೂರು ಮದುವೆಯಾಗಿದ್ದು, ಐದು ಮಕ್ಕಳಿದ್ದರು. ಶಿವಮೊಗ್ಗದ ಲಕ್ಕೊಳಿ ಬಾವಿಕರೆ ಗ್ರಾಮದ ಪತ್ನಿಯೊಂದಿಗೆ ವಾಸವಾಗಿದ್ದು, ಶಿವಮೊಗ್ಗದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹರೀಶ ಮಾರ್ಚ್ ತಿಂಗಳ ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ತಾಯಿ ಕಂಬಿಬಾಣೆಯ ಮಣಿ ಎಂಬವರ ಮನೆಗೆ ಬಂದಿದ್ದು, ಮದ್ಯ ಸೇವಿಸುವ ಚಟ ಹೊಂದಿದ್ದ ಎನ್ನಲಾಗಿದೆ. ಹರೀಶನ ತಾಯಿ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.