ವೀರಾಜಪೇಟೆ, ಜೂ. 16: ಹೊಸದಾಗಿ ಮನೆಯನ್ನು ನಿರ್ಮಾಣ ಮಾಡಿ ಮನೆ ಸೇರುವ ತವಕದಲ್ಲಿದ್ದ ವ್ಯಕ್ತಿಯೋರ್ವರು ಮರಣಹೊಂದಿದ ದಾರುಣ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಆರ್ಜಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಸಿ.ಎಂ. ಪೂವಯ್ಯ ಅವರ ಪುತ್ರ ಚಂದಪಂಡ ಅನಿಲ್ ಅಪ್ಪಣ್ಣ (42) ದುರ್ಮರಣ ಹೊಂದಿದ ವ್ಯಕ್ತಿ. ಆರ್ಜಿ ಗ್ರಾಮದಲ್ಲಿ ನಿರ್ಮಾಣ ಹಂತದ ಹೊಸ ಮನೆಯ ಕೆಲಸವನ್ನು ನೋಡಿಕೊಂಡು ಬರುವುದಾಗಿ ನಿನ್ನೆ ಸಂಜೆ ತೆರಳಿದ್ದರು. ಇಂದು ಸಂಜೆ ಹೊಸ ಮನೆಯ ಅನತಿ ದೂರದಲ್ಲಿ ಆಟವಾಡುತ್ತಿದ್ದ ಮಕ್ಕಳು ಮನೆ ಹತ್ತಿರ ತೆರಳಿದ್ದಾರೆ. ಆಗ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದಿರುವಂತೆ ಅನಿಲ್ ಅವರ ಶವ ಪತ್ತೆಯಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ನಗರ ಪೆÇಲೀಸರು ಆಗಮಿಸಿ ಸ್ಥಳ ಮಹಜರು ಮಾಡಿ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶರೀರವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. -ಕೆ.ಕೆ.ಎಸ್.