ಮಡಿಕೇರಿ, ಜೂ. 16: ಜಿಲ್ಲೆಯ ನೂತನ ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಬೆಳಗಾವಿಯಲ್ಲಿ 6 ವರ್ಷಗಳು ಮತ್ತು ಹಾಸನ ಜಿಲ್ಲೆಯ ಬೇಲೂರಿನಲ್ಲಿ 6 ತಿಂಗಳು, ಬಾದಾಮಿ, ವಿಜಯಪುರ ಮತ್ತು ಜಮಖಂಡಿಯಲ್ಲಿ ಒಟ್ಟು 11 ವರ್ಷಗಳ ಕಾಲ ಕಾರ್ಮಿಕ ನಿರೀಕ್ಷಕರಾಗಿ ಅನಿಲ್ ಬಗಟಿ ಕಾರ್ಯ ನಿರ್ವಹಿಸಿದ್ದಾರೆ.