ಮಡಿಕೇರಿ, ಜೂ. 16: ಕೊಡಗು ಬ್ಲಡ್ ಡೋನರ್ಸ್, ಮಡಿಕೇರಿ ಹಾಗೂ 7ನೇ ಹೊಸಕೋಟೆಯ ಸೇವ್ ಲೈಫ್ ಫೌಂಡೇಶನ್, ಇನ್ನಾನಿಯಾ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾ. 17 ರಂದು (ಇಂದು) ಪೂರ್ವಾಹ್ನ 7ನೇ ಹೊಸಕೋಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸ ಲಾಗಿದೆ ಎಂದು ಬ್ಲಡ್ ಡೋನರ್ಸ್ ಸಂಘಟನೆಯ ವಕ್ತಾರ ಜಲೀಲ್ ಕೂರ್ಗ್ ತಿಳಿಸಿದ್ದಾರೆ.