ಸಿದ್ದಾಪುರ, ಜೂ. 15: ವಾಹನವೊಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿದ್ದಾಪುರ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಗೋಣಿಕೊಪ್ಪಲು ತಿತಿಮತಿ ಭಾಗದಿಂದ ವಾಹನದಲ್ಲಿ (ಕೆಎ 45 3081) ಗೋಣಿಕೊಪ್ಪದಿಂದ ಬೈರಂಬಾಡ ಮಾರ್ಗವಾಗಿ ಕೊಂಡಂಗೇರಿಗೆ ಸಾಗಾಟ ಮಾಡುತ್ತಿರುವ ಸಂದÀರ್ಭದಲ್ಲಿ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೆÇಲೀಸರು ದಾಳಿ ನಡೆಸಿ ವಾಹನ ಸಹಿತ ಮೂವರನ್ನು ಬಂಧಿಸಿದ್ದಾರೆ. ವಾಹನದಲ್ಲಿದ್ದ ಆರೋಪಿಗಳಾದ ಗೋಣಿಕೊಪ್ಪ, ತಿತಿಮತಿ ಭಾಗದ ಪೈಸಲ್, ಉಬೈದ್, ಬೋಪಣ್ಣ ಮೂವರನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗಾಟ ಮಾಡುತ್ತಿದ್ದ ಎರಡು ಗೋವುಗಳನ್ನು ಚೆಟ್ಟಿಮಾನಿಯ ಗೋಶಾಲೆಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಮೋಹನ್ ರಾಜ್, ಮುಖ್ಯ ಪೇದೆ ವಿಠಲ, ಸಿಬ್ಬಂದಿಗಳಾದ ಶಿವಕುಮಾರ್, ಮಲ್ಲಪ್ಪ, ಯೋಗೇಶ್, ಸಂತೋಷ್, ಭರತ್ ಪಾಲ್ಗೊಂಡಿದ್ದರು.