ಮಡಿಕೇರಿ, ಜೂ. 14: ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 4 ವಾಹನಗಳ ಸಹಿತ 12 ಲಕ್ಷ ಮೌಲ್ಯದ ಮಡಿಕೇರಿ, ಜೂ. 14: ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 4 ವಾಹನಗಳ ಸಹಿತ 12 ಲಕ್ಷ ಮೌಲ್ಯದ ಮನೆಯವರನ್ನು ಕಟ್ಟಿ ಹಾಕಿ ಬೆದರಿಸಿ ಎರಡು ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗಾಗಿ ಏಳು ತಂಡಗಳನ್ನು ರಚಿಸಲಾಗಿತ್ತು.ತನಿಖೆ ವೇಳೆ ಮೊದಲಿಗೆ ಎಮ್ಮೆಮಾಡಿನ ಇಬ್ರಾಹಿಂ ಅಲಿಯಾಸ್ ಖಲೀಲ್ ಎಂಬಾತನನ್ನು ಬಂಧಿಸಿ ಆತನಿಂದ ಮಾರುತಿ 800 ಕಾರನ್ನು ವಶಪಡಿಸಿಕೊಂಡು ವಿಚಾರಣೆ ಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿ ರುವುದಾಗಿ ತಿಳಿದು ಬಂತು. ಅದರಂತೆ ತನಿಖೆ ಮುಂದುವರೆಸಿ ಚಿಕ್ಕಮಗಳೂರಿನ ಕಳಸ ಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಎಮ್ಮೆಮಾಡುವಿನ ಕಡುವಣಿ ಅಶ್ರಫ್ ಹಾಗೂ ಮುಸ್ತಫ ಎಂಬವರುಗಳನ್ನು ನಿನ್ನೆ ದಿನ ಬಂಧಿಸಲಾಯಿತು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇವರುಗಳು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಹಿರಂಗಗೊಂಡಿದೆ.
ವೀರಾಜಪೇಟೆಯ ಶ್ರೀನಿವಾಸ್ ಎಂಬವರ ಮನೆಯಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣ, ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿ ಹಾಗೂ
(ಮೊದಲ ಪುಟದಿಂದ) ನಾಪೋಕ್ಲು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾಫಿ, ಕರಿಮೆಣಸು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ತಿಳಿದು ಬಂದಿದೆ. ಬಂಧಿತರಿಂದ 121 ಗ್ರಾಂ ಚಿನ್ನಾಭರಣ, 14 ಚೀಲ ಕಾಫಿ, ಒಂದು ಮೊಬೈಲ್, 400 ಕೆ.ಜಿ. ಕರಿಮೆಣಸು ಮತ್ತು 3 ಕಾರು, ಒಂದು ಗೂಡ್ಸ್ ಆಟೋ ಹಾಗೂ ಕತ್ತಿಯೊಂದನ್ನು ವಶಕ್ಕೆ ಪಡೆಯಲಾಗಿದ್ದು, ಈ ಆರೋಪಿಗಳು ಕೊಡಗು ಸೇರಿದಂತೆ ಮೈಸೂರಿನ ಹಲವು ಶ್ರೀಮಂತರ ಮನೆಗಳಲ್ಲಿ ದರೋಡೆ ಮಾಡುವ ಯೋಜನೆಯನ್ನು ಹೊಂದಿದ್ದರು ಎಂಬದು ಕೂಡ ತನಿಖೆ ವೇಳೆ ಬಯಲಾಗಿದೆ.
ಈಗಾಗಲೇ ಬಂಧಿಸಲ್ಪಟ್ಟಿರುವ ಇಬ್ರಾಹಿಂ; ನಿನ್ನೆ ಬಂಧಿಸಲಾದ ಅಶ್ರಫ್ ಹಾಗೂ ಮುಸ್ತಫ ಇವರುಗಳು ಒಂದೇ ತಂಡದವರಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ. ಅವರುಗಳ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಎಸ್ಪಿ ವಿವರಿಸಿದರು.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸುಮನ್ ಡಿ. ಪನ್ನೇಕರ್, ವೀರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್ ಮಾರ್ಗದ&divlusmn;ಅರ್Àನದಲ್ಲಿ ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ, ವೀರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ, ಪ್ರೊಬೆಷನರಿ ಪಿಎಸ್ಐಗಳಾದ ವಿನಯಕುಮಾರ್ ಸಿ., ಎಸ್. ಅಭಿಜಿತ್, ಮಂಜುನಾಥ ಎಸ್., ಎಎಸ್ಐಗಳಾದ ಎಂ.ಸಿ. ನಂಜಪ್ಪ, ಎಂ.ಪಿ. ನಾಣಿಯಪ್ಪ, ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ಬಿ.ಎಂ. ರಾಮಪ್ಪ, ಹೆಚ್.ಸಿ. ಸುರೇಂದ್ರ, ಕೆ.ಡಿ. ಮನು, ಕೆ.ಎ. ಅಬ್ದುಲ್ ಮಜೀದ್, ಮುಸ್ತಾಫ, ಪಿ.ಯು. ಮುನೀರ್, ಸಂತೋಷ್ ದೊಡ್ಡಮನಿ, ಎಂ. ಚಂದ್ರಶೇಖರ, ಬಿ.ಟಿ. ಪ್ರದೀಪ, ಕೆ.ಪಿ. ರಮೇಶ್, ಎನ್.ಎಸ್. ಲೋಕೇಶ, ಗಿರೀಶ, ಈರಪ್ಪ ವಠಾರ, ಇಲಾಖಾ ವಾಹನ ಚಾಲಕರುಗಳಾದ ಮಹೇಶ, ಯೋಗೇಶ, ಪ್ರವೀಣ ಮತ್ತು ವೀರಾಜಪೇಟೆ ವೃತ್ತ ಕಚೇರಿಯ ರಿಂಪಲ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಡಿಆರ್ ಘಟಕದ ಸಿಬ್ಬಂದಿ ರಾಜೇಶ್ ಹಾಗೂ ಗಿರೀಶ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.