ಮಡಿಕೇರಿ: ಟಿ.ಶೆಟ್ಟಿಗೇರಿಯಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಸಂತೆ ದಿನವಾದ ಇಂದು ಮಧ್ಯಾಹ್ನ 3.30 ಗಂಟೆಗೆ ಮಂಜುನಾಥ್ ಎಂಬವರ ಟಾಟಾ ಏಸ್ ವಾಹನದಲ್ಲಿ (ಕೆಎ 45 ಎ 1255) ಸೋಮಶೇಖರ್, ಬಶೀರ್ ಅವರುಗಳು ಕೆ.ಆರ್ ನಗರದಿಂದ ಗೋ ಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಇವರುಗಳ ವಿರುದ್ಧ ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಗೋಮಾಂಸ ಮಾರಾಟ ಮಾಡುತ್ತಿರುವಾಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ಕೃಷಿ ಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಬಿಜೆಪಿ ಸಾಮಾಜಿಕ ಜಾಲತಾಣದ ಚೆಟ್ಟಂಗಡ ಮಹೇಶ್ ಮಂದಣ್ಣ, ಶೆಟ್ಟಿಗೇರಿ ತಾಲೂಕು ಪಂಚಾಯಿತಿ ಸದಸ್ಯೆ ಸರೋಜ, ರೈತ ಮುಖಂಡ ಅಪ್ಪಚಂಗಡ ಮೋಟಯ್ಯ, ಬಿಜೆಪಿ ಮುಖಂಡರಾದ ಮಚ್ಚಮಾಡ ಶ್ಯಾಮ್, ಕಟ್ಟೇರ ಮಿಲನ್, ಕಟ್ಟೇರ ನರೇಂದ್ರ ಉತ್ತಯ್ಯ, ಕಟ್ಟೇರ ಬೋಪಣ್ಣ, ಚೊಟ್ಟೆಯಂಡಮಾಡ ಧನಂಜಯ, ಬೊಳ್ಳಜೀರ ಅಯ್ಯಪ್ಪ, ಕರ್ನಂಡ ಚಲನ್, ಮಚ್ಚಮಾಡ ಮಾಚಯ್ಯ, ಚೊಟ್ಟೆಯಂಡಮಾಡ ಪ್ರಜಾ, ರೈತ ಮುಖಂಡರಾದ ಚೊಟ್ಟೆಯಂಡಮಾಡ ಉದಯ, ಚೊಟ್ಟೆಯಂಡಮಾಡ ಉದಯ ನೆಮ್ಮಲೆ, ಮಾಯಣಮಾಡ ರಾಜ, ಚೆಟ್ಟಂಗಡ ಲೋಹಿತ್, ಆಂಡಮಾಡ ಭರತ್, ಚೊಟ್ಟೆಯಂಡಮಾಡ ಶಿವಪ್ಪ ಇವರುಗಳು ಪತ್ತೆ ಮಾಡಿ ಆರೋಪಿಗಳನ್ನು ಹಿಡಿದು ಪೆÇೀಲಿಸರಿಗೆ ವಾಹನ ಸಹಿತ ಒಪ್ಪಿಸಿದ್ದಾರೆ. ಪೆÇಲೀಸರು ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಬಶೀರ್ ಎಂಬಾತ ತಪ್ಪಿಸಿಕೊಂಡಿದ್ದಾನೆ.