ಗೋಣಿಕೊಪ್ಪ, ಜೂ. 14: ಹಳ್ಳಿಗಟ್ಟು ಹಾಡಿಯ ನಿವಾಸಿಗಳಾದ ಇಪ್ಪತ್ತಕ್ಕೂ ಹೆಚ್ಚು ಕುಟುಂಬಕ್ಕೆ ಪ್ಲಾಸ್ಟಿಕ್ ಹೊದಿಕೆಗಳನ್ನು ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವತಿಯಿಂದ ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಫಲಾನುಭವಿಗಳಿಗೆ ಟಾರ್ಪಾಲ್‍ಗಳನ್ನು ನೀಡಿದರು. ಮಳೆಗಾಲದಲ್ಲಿ ಹಾಡಿ ನಿವಾಸಿಗಳ ಮನೆಗಳು ಸೋರುವುದರಿಂದ ತಾತ್ಕಾಲಿಕವಾಗಿ ಮಳೆಗಾಲದ ರಕ್ಷಣೆಗಾಗಿ ಟಾರ್ಪಾಲ್‍ಗಳನ್ನು ನೀಡಲಾಗುತ್ತಿದೆ. ಮುಂದಿನ ವ್ಯವಸ್ಥೆಯಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುವ ಕನಸು ಹೊಂದಲಾಗಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ, ಸಿಬ್ಬಂದಿಗಳಾದ ರಮೇಶ್, ಮಂದಣ್ಣ, ಹರ್ಷಿತ ಸೇರಿದಂತೆ ಹಲವರು ಹಾಜರಿದ್ದರು.