ಶನಿವಾರಸಂತೆ, ಜೂ. 14: ಸಮೀಪದ ಕೊಡ್ಲಿಪೇಟೆಯಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ಗಳಾದ ವೀರೇಂದ್ರ ಮತ್ತು ಸಲೀಂ ಚಾಲನೆ ನೀಡಿದರು. ಭವನ ನಿರ್ಮಾಣದ ಕಾಮಗಾರಿಯ ರೂಪುರೇಷೆ ಬಗ್ಗೆ ಗುತ್ತಿಗೆದಾರ ಪ್ರವೀಣ್ ಅವರಿಗೆ ಇಬ್ಬರೂ ಸಲಹೆ-ಸೂಚನೆಯೊಂದಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಅಂಬೇಡ್ಕರ್ ಭವನ ಕ್ರಿಯಾ ಸಮಿತಿ ಅಧ್ಯಕ್ಷ ಕೆಂಚೇಶ್ವರ್, ಪದಾಧಿಕಾರಿಗಳಾದ ಡಿ.ಆರ್. ವೇದಕುಮಾರ್, ಡಿ.ವಿ. ಜಗದೀಶ್, ಡಿ.ಎನ್. ವಸಂತ್, ಕೂಡ್ಲೂರು ದೇವರಾಜ್, ರಾಮಣ್ಣ, ಸತ್ಯಪ್ರಕಾಶ್ ಹಾಜರಿದ್ದರು.