ಮಡಿಕೇರಿ, ಜೂ. 14: ಪ್ರಕೃತಿ ಪರಿಸರದ ರಕ್ಷಣೆ ಪ್ರತಿಯೊಬ್ಬರ ಹೊಣೆ. ‘ಪರಿಸರ ರಕ್ಷಿಸಿ; ಜೀವ ವೈವಿಧ್ಯ ಉಳಿಸಿ’ ಎಂಬ ಸದುದ್ದೇಶದಿಂದ ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀಮಂಗಲ ಕೊಡವ ಸಮಾಜ, ಶ್ರೀಮಂಗಲ ಪೊಮ್ಮಕ್ಕಡ ಪರಿಷತ್ ವತಿಯಿಂದ ಸಮಾಜದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೆಟ್ಟ ಗಿಡಗಳನ್ನು ಸಂಪೂರ್ಣವಾಗಿ ಸಂರಕ್ಷಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಪರಿಷತ್ ಅಧ್ಯಕ್ಷೆ ಕಟ್ಟೇರ ಸುಶೀಲಾ ಹಾಗೂ ಉಪಾಧ್ಯಕ್ಷೆ ಬೊಜ್ಜಂಗಡ ಶೈಲಾ ನುಡಿದರು. ಕಾರ್ಯಕ್ರಮದ ಅಂಗವಾಗಿ ಪೊಮ್ಮಕ್ಕಡ ಪರಿಷತ್ನ ನಿರ್ದೇಶಕರು ಹಾಗೂ ಸದಸ್ಯರು ತಲಾ ಒಂದೊಂದು ಗಿಡವನ್ನು ದತ್ತುಪಡೆದು ಸಲಹುವುದಾಗಿ ಭರವಸೆಯಿತ್ತರು.