ಮಡಿಕೇರಿ, ಜೂ.14: ಜಲಾಮೃತ ಯೋಜನೆಯಡಿ ಕೊಡಗು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯನ್ನೊಳಗೊಂಡ ತಂಡವು ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಗಳು, ಗೋಕಟ್ಟೆ ಮತ್ತು ಕಲ್ಯಾಣಿಗಳ ಸಮೀಕ್ಷೆಯನ್ನು ತಾ. 15 ರಿಂದ (ಇಂದಿನಿಂದ) ತಾ.20 ರವರೆಗೆ ನಡೆಸಲಿದ್ದಾರೆ.
ಈ ನಿಟ್ಟಿನಲ್ಲಿ ಸಮೀಕ್ಷಾ ತಂಡಗಳಿಗೆ ಸಮೀಕ್ಷೆ ನಡೆಸಲು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ತಿಳಿಸಿದ್ದಾರೆ.