ಗುಡ್ಡೆಹೊಸೂರು, ಜೂ. 14: ಕುಶಾಲನಗದ ಪಶು ಆಸ್ಪತ್ರೆಗೆ ಸುತ್ತಮುತ್ತಲಿನ ನಾಗರಿಕರು ಮತ್ತು ಹೈನುಗಾರಿಕೆ ಮಾಡುವವರು ತಮ್ಮ ಸಾಕು ಪ್ರಾಣಿಗಳಿಗೆ ಬೇಕಾದ ಔಷಧಿಗಳನ್ನು ತರಲು ತೆರಳಿದರೆ ಅಲ್ಲಿ ಯಾವುದೇ ರೀತಿಯ ಔಷಧಿ ಲಭ್ಯವಿಲ್ಲ ಎಂದು ವಾಪಾಸ್ಸಾಗುತ್ತಿದ್ದಾರೆ. ಸುಮಾರು 2 ತಿಂಗಳಿನಿಂದ ಇದೇ ಪರಿಸ್ಥಿತಿಯಾಗಿದೆ ಎಂದು ಗುಡ್ಡೆಹೊಸೂರು ಬಳಿಯ ಸುಣ್ಣದಕೆರೆ ಗ್ರಾಮದ ರೈತ ಸಿ.ಬಿ. ಪಳಂಗಪ್ಪ ಮತ್ತು ಹಲವರು ರೈತರು ದೂರಿಕೊಂಡಿದ್ದಾರೆ.

ಆಸ್ಪತ್ರೆಗೆ ತೆರಳಿ ಸೂಕ್ತ ಔಷಧಿ ಕೇಳಿದರೆ ಲಾಕ್ ಡೌನ್ ಆದ ಮೇಲೆ ಔಷಧಿಗಳು ಪೂರೈಕೆಯಾಗುತ್ತಿಲ್ಲ ಎಂದು ಕಛೇರಿ ಸಿಬ್ಬಂದಿಗಳು ತಿಳಿಸುತ್ತಾರೆ ಎಂದು ರೈತರು ದೂರಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.