ನಾಪೋಕ್ಲು, ಜೂ. 14: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಹಿರಿಯ ವ್ಯಕ್ತಿಯೊಬ್ಬರು ತಮ್ಮ 100ನೇ ವಯಸ್ಸಿಗೆ ಕಾಲಿರಿಸಿದ್ದು, ಈ ಶತಾಯುಷಿಯ ಹುಟ್ಟುಹಬ್ಬವನ್ನು ಕುಟುಂಬಸ್ಥರು ಬಂಧುಬಳಗದವರೊಂದಿಗೆ ಸಂಭ್ರಮಿಸಿದರು.
ಚೌರೀರ ತಿಮ್ಮಯ್ಯ ಅವರು ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಿದ ನಿವೃತ್ತ ಯೋಧರು ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಶತ ವರ್ಷ ಕಂಡ ಊರಿನ ಹಿರಿಯ ತಿಮ್ಮಯ್ಯ ಅವರು ಪಾಲೂರು ಗ್ರಾಮದ ಚೌರೀರ ಅಣ್ಣಯ್ಯ ಮತ್ತು ಸುಬ್ಬವ್ವನವರ ಮಗನಾಗಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಾಲೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ನಾಪೆÇೀಕ್ಲು ಮತ್ತು ಮೂರ್ನಾಡುವಿನಲ್ಲಿ ಮುಗಿಸಿ ತಮ್ಮ 21ನೇ ವರ್ಷದಲ್ಲಿಯೇ 1941ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡರು. ಸೇನೆಯಲ್ಲಿ ಸುಮಾರು 15 ವರ್ಷಗಳ ಸೇವೆಯನ್ನು ಮುಗಿಸಿ 1956 ರಲ್ಲಿ ಸೇನೆಯ ಹವಾಲ್ದಾರ್ ಆಗಿ ಬಡ್ತಿ ಹೊಂದಿ ನಿವೃತ್ತರಾದರು.
ಕರ್ತವ್ಯದಲ್ಲಿದಾಗ ಇವರು 2ನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಅವರಿಗೆ ಬರ್ಮಾವಾರ್ ಮೆಡಲ್ ನೀಡಿ ಗೌರವಿಸಲಾಗಿತ್ತು. ಇವರು 2013ರಲ್ಲಿ ತಮ್ಮ ಧರ್ಮ ಪತ್ನಿ ಉಮ್ಮವ್ವಳನ್ನು ಕಳೆದುಕೊಂಡು ಇವರಿಗೆ ಇಬ್ಬರು ಪುತ್ರರಿದ್ದು, ಇವರೊಂದಿಗೆ ತಮ್ಮ ನಿವೃತ್ತ ಜೀವನವನ್ನು ಕಳೆಯುತ್ತಿದ್ದಾರೆ.
ವೀರ ಸೇನಾನಿ 100ನೇ ಹುಟ್ಟುಹಬ್ಬವನ್ನು ಮಕ್ಕಳು, ಕುಟುಂಬದವರೊಂದಿಗೆ ಚೌರೀರ ತಮ್ಮ ಐನ್ ಮನೆಯಲ್ಲಿ ಇತ್ತೀಚೆಗೆ ಆಚರಿಸಿದರು. ನಂತರ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌರೀರ ಬೋಪಯ್ಯ ಅವರು ವಹಿಸಿ ಶತಾಯುಷಿ ತಿಮ್ಮಯ್ಯ ಅವರನ್ನು ಗೌರವಿಸಿದರು. ಈ ಸಂದರ್ಭ ಕುಟುಂಬದ ಸದಸ್ಯ ನಿವೃತ ಕರ್ನಲ್ ಸಿ.ಎ. ಗಣಪತಿ. ಕ್ಯಾಪ್ಟನ್ ನಾಣಯ್ಯ ಮತ್ತು ಮಕ್ಕಳಾದ ಅಪ್ಪಯ್ಯ, ಅಪ್ಪಣ್ಣ, ಕುಟುಂಬದ ಸದಸ್ಯರು ಬಂದು ಮಿತ್ರರಿದ್ದರು.
- ದುಗ್ಗಳ ಸದಾನಂದ.