ವೀರಾಜಪೇಟೆ, ಜೂ. 13: ಹಣದ ವಂಚನೆ ಪ್ರಕರಣದಲ್ಲಿ ಪೊಲೀಸ ರಿಂದ ಹಲ್ಲೆಗೊಳಗಾದ ವ್ಯಕ್ತಿ ವೀರಾಜಪೇಟೆ ಸಾರ್ವಜನಿಕ ಆಸ್ಪತೆಯಲ್ಲಿ ದಾಖಲಾದರೂ ಪೊಲೀಸರು ಗಾಯಾಳುವಿನ ಹೇಳಿಕೆ ಪಡೆದು ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ಬಿ.ಆರ್ ರತ್ನಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಬಲ್ಲಮಾವಟಿ ಗ್ರಾಮದ ರವೀಶ್ ಪ್ರಸಾದ್ ಎಂಬವರಿಗೆ ಬೆಂಗಳೂರಿನ ಶ್ವೇತಾ ಎಂಬ ಯುವತಿ ಫೇಸ್‍ಬುಕ್‍ನಲ್ಲಿ ಪರಿಚಯಗೊಂಡು ಪ್ರೇಮಿಗಳಾಗಿದ್ದಾರೆ. ನಾಪೋಕ್ಲುವಿನ ರವೀಶ್ ಪ್ರಸಾದ್ 2018ರಲ್ಲಿ ತನ್ನ ಪಕ್ಕದ ಮನೆಯ ಸುಬ್ಬಯ್ಯ ಎಂಬವರನ್ನು ಬೆಂಗಳೂರಿನ ಶ್ವೇತಾಳಿಗೆ ಪರಿಚಯ ಮಾಡಿಕೊಟ್ಟು ಬೆಂಗಳೂರಿನಲ್ಲಿ ಸೈಟು ಖರೀದಿಸುವ ಪ್ರಸ್ತಾಪಗೊಂಡಿದೆ. ಸುಬ್ಬಯ್ಯ ಸೈಟು ಖರೀದಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ 35 ಲಕ್ಷರೂಗಳನ್ನು ನಾಪೋಕ್ಲು ಐ.ಓ.ಬಿ ಹಾಗೂ ಎಸ್.ಬಿ.ಐ. ಬ್ಯಾಂಕ್‍ನಲ್ಲಿ ರವೀಶ್ ಪ್ರಸಾದ್ ಅವರ ಖಾತೆಗೆ ಜಮಾ ಮಾಡಿದ್ದಾರೆ. ರವೀಶ್ ಪ್ರಸಾದ್ ಹಣವನ್ನು ಡ್ರಾ ಮಾಡಿ ಮುನ್ಸೂಚನೆಯಂತೆ ಕುಶಾಲನಗರಕ್ಕೆ ಸಂಗಡಿಗರೊಂದಿಗೆ ಬಂದಿದ್ದ ಶ್ವೇತಾ ಅವರಿಗೆ ಹಣ ಖುದ್ದು ಹಸ್ತಾಂತರ ಮಾಡಿದ್ದಾರೆ. ಹಣ ಪಡೆದುಕೊಂಡ ಶ್ವೇತಾ ತಮ್ಮ ಫೇಸ್‍ಬುಕ್, ಮೊಬ್ಯೆಲ್ ಹಾಗೂ ಎಲ್ಲಾ ಖಾತೆಗಳನ್ನು ಬಂದ್ ಮಾಡಿದ್ದಾರೆ.

ನಗದು ಹಣ ನೀಡಿ ಸೈಟು ದೊರಕದೆ ವಂಚನೆಗೊಂಡ ಸುಬ್ಬಯ್ಯ ಅವರು 2019 ನವೆಂಬರ್‍ನಲ್ಲಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದೂರು ನೀಡಿದ ಮೇರೆಗೆ ರವೀಶ್ ಪ್ರಸಾದ್‍ನನ್ನು ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಛಾಪಾ ಕಾಗದದÀಲ್ಲಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

ಸುಬ್ಬಯ್ಯ 08.06.20 ರಂದು ಮಡಿಕೇರಿಯ ಸೈಬರ್ ಕ್ರೈಂ ಠಾಣೆಯಲ್ಲಿ ರವೀಶ್ ಪ್ರಸಾದ್ ಹಣ ವಂಚಿಸಿದ ಕುರಿತು ಮತ್ತೊಂದು ದೂರು ದಾಖಲಿಸಿದ್ದಾರೆ. ಸೈಬರ್ ಕ್ರೈಂ ಅಧಿಕಾರಿಯೊಬ್ಬರು ರವೀಶ್ ಪ್ರಸಾದ್ ಅವರನ್ನು ಬಂಧಿಸಿ ಠಾಣೆಯಲ್ಲಿ ದೈಹಿಕ ಹಿಂಸೆ ನೀಡಿದ್ದಾರೆ ಎಂದು ವಕೀಲ ಆರೋಪಿಸಿದ್ದಾರೆ. ಜೂನ್ 9 ರಂದು ಮಡಿಕೇರಿಯ ಆಸ್ಪತ್ರೆಯಲ್ಲಿ ಪೊಲೀಸರು ಹಲ್ಲೆ ನಡೆಸಿಲ್ಲ, ಯಾವುದೇ ಗಾಯವಾಗಿಲ್ಲ ಎಂದು ವ್ಯೆದ್ಯರ ಮೇಲೆ ಒತ್ತಡ ಹಾಕಿ ದೃಢೀಕರಣ ಪತ್ರ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಡಿಕೇರಿ ನ್ಯಾಯಾಲಯದಲ್ಲಿ ಜೂನ್ 10 ರಂದು ರವೀಶ್ ಪ್ರಸಾದ್‍ಗೆ ಜಾಮೀನಿನ ಬಿಡುಗಡೆ ದೊರೆತಿದೆ. ಪೊಲೀಸರು ಹೊಡೆದು ಕೈ ಮುರಿದಿದ್ದರಿಂದ ರವೀಶ್ ಪ್ರಸಾದ್ ಜೂನ್ 11 ರಂದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಲು ಬಂದಾಗ ಸೈಬರ್ ಕ್ರೈಂ ಪೊಲೀಸರ ಪ್ರಭಾವದ ಮೇರೆ ಇಲ್ಲಿನ ಆಸ್ಪತ್ರೆಯ ವೈದ್ಯ ಮೇಲ್ನೋಟಕ್ಕೆ ಏನು ಆಗಿಲ್ಲ. ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಾಗ ವೈದ್ಯರ ಮೇಲೆ ತಾನು ಒತ್ತಡ ಹೇರಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶೆಟ್ಟಿ ತಿಳಿಸಿದ್ದಾರೆ. ರವೀಶ್ ಪ್ರಸಾದ್ ಕೈನ ಮುರಿದ ಮೂಳೆಯ ನೋವು ತಡೆಯಲಾಗದೆ ನಿನ್ನೆ ದಿನ ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್‍ರೆ ತೆಗೆದಾಗ ಮೂಳೆ ಮುರಿದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಪ್ರಕರಣ ಎಂ.ಎಲ್.ಸಿ. ಕೇಸ್ ಆದ ಕಾರಣ ಪೊಲೀಸರು ಹೇಳಿಕೆ ಪಡೆದು ಕಾನೂನಿನ ಕ್ರಮ ಕೈಗೊಳ್ಳಬೇಕು. ಪ್ರಭಾವದ ಮೇರೆ ಇಲ್ಲಿನ ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಮೆಮೋ ಕಳಿಸಿದರೂ ಈ ತನಕ ಯಾವುದೇ ಕ್ರಮ ಮುಂದುವರೆಸಿಲ್ಲ. ಪೊಲೀಸರು ಈ ಸಂ¨ಂಧದಲ್ಲಿ ಮುಂದಿನ ಕ್ರಮ ಕೈಗೊಳ್ಳದಿದ್ದರೆ ಸಮುಚ್ಚಯ ನ್ಯಾಯಾಲಯದ ಸಂಬಂಧಿಸಿದ ನ್ಯಾಯಾಧೀಶರಿಗೆ ನೇರವಾಗಿ ದೂರು ನೀಡಿ ಖಾಸಗಿ ಪ್ರಕರಣ ದಾಖಲಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಗಾಯಾಳು ರವೀಶ್ ಪ್ರಸಾದ್ ಉಪಸ್ಥಿತರಿದ್ದರು.