ಕೂಡಿಗೆ, ಜೂ. 13: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಹಾರಂಗಿಯಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮೇಲ್ಭಾಗ ದಲ್ಲಿ ಕೇಂದ್ರ ಜಲ ಆಯೋಗ ಸ್ವಯಂಚಾಲಿತ ವಾಟರ್ ಗೇಜ್ ಯಂತ್ರವನ್ನು ಆರು ತಿಂಗಳುಗಳ ಹಿಂದೆ ಅಳವಡಿಸಲಾಗಿದೆ.
ಅಣೆಕಟ್ಟೆಗೆ ಜಲಾನಯನ ಪ್ರದೇಶದಿಂದ ಹರಿದು ಬರುವ ನೀರಿನ ಪ್ರಮಾಣ, ನದಿಯಿಂದ ಹೊರ ಹರಿಯುವ ನೀರಿನ ಪ್ರಮಾಣದ ಸಮಗ್ರವಾದ ಮಾಹಿತಿ, ಮಳೆಯ ಪ್ರಮಾಣ ಮುಂತಾದ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರದ ಜಲ ಆಯೋಗವು ಈ ನೂತನ ಯಂತ್ರವÀನ್ನು ಅಳವಡಿಸಿದೆ.
ಈ ವಾಟರ್ ಗೇಜ್ ಯಂತ್ರವು ಉಪಗ್ರಹ ಮೂಲಕ ನೀರಿನ ಮಟ್ಟ ಒಳ ಹರಿವು ಹೊರ ಹರಿವು ಸೇರಿದಂತೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಸಮಗ್ರವಾದ ಮಾಹಿತಿಯನ್ನು ಏಕಕಾಲದಲ್ಲಿ ನೀಡಲಿದೆ. ರಾಜ್ಯದ ಎಲ್ಲಾ 22 ಅಣೆಕಟ್ಟೆಗಳಿಗೆ ಈ ತಂತ್ರಜ್ಞಾನ ಅಳವಡಿಸಲಾಗಿದೆ
ಈ ಅಧುನಿಕ ಯಂತ್ರದ ಸಮಗ್ರವಾದ ವರದಿ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ದೆಹಲಿಯಲ್ಲಿ ನೋಂದಣಿ ಆಗುತ್ತದೆ. ಇದರ ಆಧಾರದ ಮೇಲೆ ಮಳೆಯ ಪ್ರಮಾಣ ಹವಾಮಾನ ವರದಿ ಮುನ್ಸೂಚನೆಯ ಮಾಹಿತಿಗಳನ್ನು ಪಡೆಯಬಹುದಾಗಿದೆ ಜೊತೆಗೆ ಸ್ಥಳೀಯವಾಗಿ ಹಿಂದಿನಂತೆ ಮಾಹಿತಿಯನ್ನು ಸಂಗ್ರಹ ಮಾಡುಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್. ಮಹೇಂದ್ರ ಕುಮಾರ್ ಇಂಜಿನಿಯರ್ ನಾಗರಾಜ ತಿಳಿಸಿದ್ದಾರೆ.