ನಾಪೆÇೀಕ್ಲು, ಜೂ. 13: ಕಳೆದ ಎರಡೂವರೆ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ನಿಧಾನವಾಗಿ ಆರಂಭಗೊಳ್ಳುತ್ತಿದೆ. ನಾಪೆÇೀಕ್ಲು - ವೀರಾಜಪೇಟೆ ಸಂಪರ್ಕ ಕಲ್ಪಿಸುವ ಖಾಸಗಿ ಬಸ್ ಒಂದು ಸೋಮವಾರ ಸಂಚಾರ ಆರಂಭಿಸಿದ್ದು ಗ್ರಾಮೀಣ ಭಾಗದ ಜನರು ನಿಟ್ಟುಸಿರು ಬಿಟ್ಟರು.
ಹಲವು ದಿನಗಳಿಂದ ಬಸ್ ಸಂಚಾರವಿಲ್ಲದೇ ಗ್ರಾಮೀಣ ಜನರಿಗೆ ಸಮಸ್ಯೆಯಾಗಿತ್ತು. ಸೋಮವಾರ ಬಸ್ ಸಂಚಾರ ಆರಂಭಗೊಂಡಿದ್ದು, ಹಲವರಿಗೆ ಪ್ರಯೋಜನಕಾರಿಯಾಯಿತು. ಇದುವರೆಗೆ ಖಾಸಗಿ ವಾಹನ, ಆಟೋಗಳನ್ನು ಅವಲಂಬಿಸಿದ್ದ ಮಂದಿ ಊರಿಗೆ ತೆರಳಲು ಬಸ್ಸನ್ನು ಅವಲಂಬಿಸಿದರು. ಕಕ್ಕಬ್ಬೆ, ಕುಂಜಿಲ, ಚೆಯ್ಯಂಡಾಣೆ, ಕಡಂಗ ಮತ್ತಿತರ ಭಾಗಗಳ ಗ್ರಾಮಸ್ಥರು ಬಸ್‍ನಲ್ಲಿ ಸಂಚರಿಸಿದರು. ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳಬೇಕಾಗಿದ್ದ ಶಿಕ್ಷಕರಿಗೂ ಖಾಸಗಿ ಬಸ್ ಸಂಚಾರ ಸಂತಸ ತಂದಿತು.