ವೀರಾಜಪೇಟೆ, ಜೂ. 13: ವೀರಾಜಪೇಟೆಯ ಮುಖ್ಯ ರಸ್ತೆಯಿಂದ ಗಾಂಧಿನಗರಕ್ಕೆ ಹೋಗುವ ತಿರುವು ರಸ್ತೆಯಲ್ಲಿರುವ ಉದ್ಯಮಿ ಶ್ರೀನಿವಾಸ್ ಎಂಬವರ ಮನೆಗೆ ನುಗ್ಗಿ ಕೊಠಡಿಯೊಳಗಿನ ಅಲ್ಮೇರಾದಿದಂದ ಸುಮಾರು ರೂ. 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಕಳವು ತಂಡದ ಸುಳಿವು ವೀರಾಜಪೇಟೆ ನಗರ ಪೊಲೀಸರಿಗೆ ದೊರೆತಿದೆ.

ನಗರ ಪೊಲೀಸರ ತನಿಖಾ ತಂಡ ಕಳವು ತಂಡವನ್ನು ವಶಪಡಿಸಿಕೊಂಡಿದ್ದು, ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲು ಮುಂದಿನ ಕ್ರಮಕೈಗೊಂಡಿದ್ದಾರೆ. ಶ್ರೀನಿವಾಸ್ ಅವರ ಮನೆಯಲ್ಲಿ ಸುಮಾರು 50 ದಿನಗಳ ಹಿಂದೆ ಈ ಕಳವು ನಡೆದಿದ್ದು ಶ್ವಾನ ದಳªವನ್ನು ಕರೆಸಿದರೂ ಕಳ್ಳರ ತಂಡವನ್ನು ಪತ್ತೆಹಚ್ಚಲು ಶ್ವಾನ ದಳ ವಿಫಲಗೊಂಡಿತ್ತು.