ಮಡಿಕೇರಿ, ಜೂ. 12: ಮರಗೋಡುವಿನಿಂದ ಅಭ್ಯತ್‍ಮಂಗಲಕ್ಕಾಗಿ ಅಲ್ಲಿನ ನೇತಾಜಿ ನಗರಕ್ಕೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಡಾಮರು ಹಾಕಿರುವ ರಸ್ತೆ ಈಗ ತೀವ್ರ ಹದಗೆಟ್ಟಿದ್ದರೂ ಯಾರೂ ಗಮನಹರಿಸಿಲ್ಲ ಎಂದು ಟೀಕಿಸಿರುವ ಗ್ರಾಮಸ್ಥರು, ಕೂಡಲೇ ಸರಿಪಡಿಸುವಂತೆ ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ.