ಚೆಟ್ಟಳ್ಳಿ, ಜೂ. 12: ಚೆಟ್ಟಳ್ಳಿ ನಗರದಿಂದ ಬೆಟ್ಟ ಪೈಸಾರಿ ಕಡೆ ಹೋಗುವ ದಾರಿಯಲ್ಲಿ ಬೃಹತ್ ಗಾತ್ರದ ನೇರಳೆ ಮರವೊಂದು ಉರುಳಿ ಬಿದ್ದು, ಜನ ಹಾಗೂ ವಾಹನಗಳು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆ ರಸ್ತೆಯಲ್ಲಿ ಹಲವಾರು ಜನರು ಓಡಾಡುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರವು ಹಗಲಿನ ವೇಳೆ ಬೇರು ಸಮೇತ ರಸ್ತೆಗೆ ಅಡ್ಡಲಾಗಿ ಉರುಳಿದ್ದು ಅದೃಷ್ಟವಶಾತ್ ಅನಾಹುತ ತಪ್ಪಿದೆ.

ಮರವು ಬೃಹತ್ ಗಾತ್ರದಿಂದ ಕೂಡಿದ್ದು ಅದನ್ನು ಕ್ರೇನ್ ಮುಖಂತರ ತೆರವುಗೊಳಿಸಲಾಯಿತು. ಮರವನ್ನು ತೆರವುಗೊಳಿಸಲು ಪುತ್ತರಿರ ಪಪ್ಪು ತಿಮ್ಮಯ್ಯ ಅವರು ಕ್ರೇನ್ ಅನ್ನು ಒದಗಿಸಿದರೆ, ಮರವನ್ನು ತೆರವುಗೊಳಿಸಲು ದಾಳ್ವಾರೆನ್ ಎಸ್ಟೇಟ್ ಕಾರ್ಮಿಕರು ಮತ್ತು ಬೆಳೆಗಾರರಾದ ಪುತ್ತರಿರ ಎಸ್. ಅಚ್ಚಯ್ಯ ಸಹಕಾರ ನೀಡಿದರು.