ಕಡಂಗ, ಜೂ. 12: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಚಾರ ಬಯಸುವ ನಿಟ್ಟಿನಲ್ಲಿ ಇತ್ತೀಚೆಗೆ ಹಲವರು ಪ್ರವಾದಿ ನಿಂದನೆ ಮಾಡುವುದು ಕಂಡುಬರುತ್ತಿದ್ದು, ಪ್ರವಾದಿ ಮುಹಮ್ಮದ್‍ರನ್ನು ಅವಹೇಳನ ಮಾಡುವುದು ಸಹಿಸಲಸಾಧ್ಯವಾದದ್ದಾಗಿದೆ ಎಂದು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಕೊಡ್ಲಿಪೇಟೆ ಹೇಳಿದ್ದಾರೆ.

ರಾಜಕೀಯ ತರ್ಕ ವಿಷÀಯಗಳು ಹಾಗೂ ಸಂಘಟನಾತ್ಮಕ ವಿಚಾರಗಳನ್ನು ಸೈದ್ಧಾಂತಿಕವಾಗಿ ಎದುರಿಸಬೇಕೇ ವಿನಹ ಧರ್ಮಗಳನ್ನು ಹಾಗೂ ಅದರ ದಾರ್ಶನಿಕ ವ್ಯಕ್ತಿಗಳನ್ನು ಆ ವಿಚಾರಗಳಲ್ಲಿ ಎಳೆದು ತರುವುದು ಬುದ್ಧಿ ಇರುವ ವ್ಯಕ್ತಿಗಳಿಗೆ ಹಿಡಿಸಿದ್ದಲ್ಲ.

ಹೀಗೆ ಪರಸ್ಪರ ಧಾರ್ಮಿಕ ವ್ಯಕ್ತಿಗಳಾದ ಮಹಾತ್ಮರನ್ನು ನಿಂದಿಸುವುದರಿಂದ ದೇಶದ ಸಾಮರಸ್ಯ ಹಾಳಾಗಲಿದೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.