ಮಡಿಕೇರಿ, ಜೂ. 12: ಜಿಲ್ಲಾ ದ.ಸಂ.ಸ.ದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆ ಹಾಗೂ ಬುದ್ಧಪೂರ್ಣಿಮೆಯ ಅಂಗವಾಗಿ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ದಿನಬಳಕೆಯ ಉಡುಪುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸೌಮ್ಯಾ.ಡಿ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಉಡುಪುಗಳನ್ನು ವಿತರಿಸಿದರು. ಪದವಿ ಕಾಲೇಜಿನ ಪ್ರಾಧ್ಯಾಪಕಿ ನಿರ್ಮಲಾ, ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷ ದಿವಾಕರ್ ಹೆಚ್. ಎಲ್, ಡಿ.ಎಸ್.ಎಸ್. ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್, ಡಿ.ಎಸ್.ಎಸ್. ತಾಲೂಕು ಸಂಚಾಲಕ ದೀಪಕ್ ಕೆ.ಪಿ., ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್ ಹಾಜರಿದ್ದರು. ಸೌಮ್ಯ ಅವರು ಆಶ್ರಮದ ನಿವಾಸಿಗಳ ಬಗ್ಗೆ ಮಾತನಾಡುತ್ತಾ ವೃದ್ಧರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ತನ್ನಿಂದ ಸಾಧ್ಯವಾಗುವ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್ ಕೊರೊನಾ ಸೋಂಕಿನ ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯದ ಕಡೆಗೆ ಸಾಕಷ್ಟು ಗಮನಹರಿಸಬೇಕು ಎಂದರು. ದಲಿತ ಸಂಘಷರ್À ಸಮಿತಿಯ ಜಿಲ್ಲಾಧ್ಯಕ್ಷ ದಿವಾಕರ್ ಹೆಚ್.ಎಲ್. ಸಮಿತಿಯ ಧ್ಯೇಯೋದ್ದೇಶಗಳಿಗೆ ತಲೆಬಾಗಿ ಸಾಧ್ಯವಾದಷ್ಟು ಅಸಹಾಯಕರಿಗೆ ಸಹಾಯ ಮಾಡುವ ಧ್ಯೇಯ ನಮ್ಮದು.
ಈ ರೀತಿಯ ಸೇವಾಕಾರ್ಯವನ್ನು 19 ವಷರ್Àಗಳಿಂದ ನಡೆಸಿಕೊಂಡು ಬರುತ್ತಿರುವೆವು ಎಂದರು. ದಲಿತ ಸಂಘಷರ್À ಸಮಿತಿಯ ತಾಲೂಕು ಸಂಚಾಲಕ ದೀಪಕ್ ಕಾರ್ಯಕ್ರಮ ನಿರೂಪಿಸಿ ಸರ್ವರನ್ನೂ ವಂದಿಸಿದರು.