ನಾಪೆÇೀಕ್ಲು, ಜೂ. 12 : ಇತ್ತಿಚೇಗೆ ನಾಪೆÇೀಕ್ಲು ಪೊಲೀಸ್ ಠಾಣೆಯಲ್ಲಿ ನಾಗರಿಕರ ಸಭೆ ಕರೆದು ನಗರದಲ್ಲಿ ವಾಹನ ಮಾಲೀಕರು ಮತ್ತು ಚಾಲಕರು ಸಂಚಾರ ನಿಯಮವನ್ನು ಪಾಲಿಸುವ ಬಗ್ಗೆ ಠಾಣಾಧಿಕಾರಿ ಆರ್. ಕಿರಣ್‍ರವರು ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿ ಅದರಂತೆ ಪ್ರತಿ ವಾಹನ ಮಾಲೀಕರು ಮತ್ತು ಚಾಲಕರು ಸೂಕ್ತ ದಾಖಲೆಯನ್ನು ಹೊಂದಿರಬೇಕು ಇಲ್ಲದಿದ್ದರೆ ಕಾನೂನಿನಂತೆ ವಾಹನ ಕಾಯ್ದೆಯ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಹೇಳಿದ್ದರು. ಆದರೆ ನಂತರವು ಕೆಲವರು ಕಾನೂನಿನಂತೆ ನಡೆದುಕೊಳ್ಳದೇ ಇರುವುದನ್ನು ಗಮನಿಸಿದ ಠಾಣಾಧಿಕಾರಿ ಕಿರಣ್ ನಗರದಲ್ಲಿ ಎರಡು ಚಕ್ರದ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಸವಾರರಿಗೆ ಸ್ಥಳದಲ್ಲಿ ದಂಡ ವಿಧಿಸಿ ಕಾನೂನಿನ ಎಚ್ಚರಿಗೆ ನೀಡಿದರು. ಎ.ಎಸ್.ಐ. ವಿಶ್ವನಾಥ್, ಬಷೀರ್ ಮತ್ತಿತರ ಸಿಬ್ಬಂದಿಗಳು ಇದ್ದರು.
-ದುಗ್ಗಳ