ಗೋಣಿಕೊಪ್ಪಲು, ಜೂ. 12: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು, ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ ಸೋಮಯಂಡ ಕವನ್ ಕಾರ್ಯಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಲಚೀರ ಕವಿತಾ, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಮಹದೇವ್ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ರಾಜೇಶ್, ರೈತ ಮೋರ್ಚಾ ಅಧ್ಯಕ್ಷರಾಗಿ ಕಟ್ಟೇರ ಈಶ್ವರ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಸುಭಾಶ್ ಮ್ಯಾಥ್ಯೂ ಇವರುಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ವೀರಾಜಪೇಟೆ ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ತಿಳಿಸಿದ್ದಾರೆ. ಸಹಕಾರ ಪ್ರಕೋಷ್ಟದ ಅಧ್ಯಕ್ಷರಾಗಿ ಚಿಮ್ಮಣಮಾಡ ಕೃಷ್ಣ ಗಣಪತಿ, ಕಾಫಿ ಬೆಳೆಗಾರರ ಪ್ರಕೋಷ್ಟಕ್ಕೆ ಕೂಪದೀರ ಮುತ್ತಪ್ಪ ವರ್ತಕರ ಪ್ರಕೋಷ್ಟಕ್ಕೆ ಮತ್ರಂಡ ಪ್ರವೀಣ್, ಆರ್ಥಿಕ ಪ್ರಕೋಷ್ಟಕ್ಕೆ ಮೂಕೊಂಡ ವಿಜು ಸುಬ್ರಮಣಿ ಇವರುಗಳಿಗೆ ಅಧಿಕಾರವನ್ನು ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.