ಸಿದ್ದಾಪುರ, ಜೂ 12: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ಸೈನಿಕರಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್‍ಕುಮಾರ್ ಜಾಲತಾಣದ ಬಗ್ಗೆ ತರಬೇತಿ ಶಿಬಿರ ನಡೆಯಿತು. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಜಾಲತಾಣದಲ್ಲಿ ಸಂದೇಶಗಳನ್ನು ಹಾಗೂ ಮಾಹಿತಿಗಳನ್ನು ಯಾವ ರೀತಿಯಲ್ಲಿ ಪಡೆದು ಕೊಳ್ಳಬೇಕೆಂದು ಕೊರೊನಾ ಸೈನಿಕರಿಗೆ ಅನಿಲ್‍ಕುಮಾರ್ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳು ಹಾಗೂ ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕರು ಶಿಬಿರದಲ್ಲಿ ಹಾಜರಿದ್ದರು.