*ಸಿದ್ದಾಪುರ, ಜೂ.11 : ಕೊಡಗು ಜಿಲ್ಲಾ ಬಿಜೆಪಿಯ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡರಾದ ಚೆಟ್ಟಳ್ಳಿಯ ಬಲ್ಲಾರಂಡ ಕಂಠಿಕಾರ್ಯಪ್ಪ, ಸೋಮವಾರಪೇಟೆಯ ದರ್ಶನ್ ಜೋಯಪ್ಪ ಹಾಗೂ ಶರತ್ ಚಂದ್ರ ನಡುವೆ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.
ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯನಿರ್ವಾಹಕ ಕಂಠಿಕಾರ್ಯಪ್ಪ ಪರ ವಿಹೆಚ್‍ಪಿ ಹಿಂದೂ ಜಾಗರಣ ವೇದಿಕೆ, ಭಜರಂಗದಳ ಸೇರಿದಂತೆ ಸಂಘ ಪರಿವಾರ ಮತ್ತು ಬಿಜೆಪಿಯ ಯುವ ಕಾರ್ಯಕರ್ತರು ಹೆಚ್ಚು ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಪಕ್ಷದ ಸಭೆಯಲ್ಲಿ ದರ್ಶನ್ ಜೋಯಪ್ಪ ಪರ ಹಲವರಿಂದ ಒಲವು ವ್ಯಕ್ತವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಭಾರತೀಶ್ ಅವರು ಕೂಡ ದರ್ಶನ್ ಪರ ಮಾತನಾಡಿದರೆ, ಶಾಸಕ ಕೆ.ಜಿ.ಬೋಪಯ್ಯ ಅವರು ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗಿದೆ.
ಇದೀಗ ನೂತನ ಯುವ ನಾಯಕನ ಆಯ್ಕೆಯ ಕಡತ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿದ್ದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರತಾಪ್ ಸಿಂಹ ಅವರುಗಳು ಅಂಕಿತ ಹಾಕಬೇಕಿದೆ.
-ಅಂಚೆಮನೆ ಸುಧಿ