ಮಡಿಕೇರಿ, ಜೂ.11: ನಗರಸಭೆ ಆಸ್ತಿ ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ, ಈ ಹಿಂದೆ ಆಸ್ತಿ ತೆರಿಗೆ ಹೆಚ್ಚಳ ಸಂಬಂಧಿಸಿದಂತೆ, 2020-21ನೇ ಸಾಲಿನ ಆರ್ಥಿಕ ವರ್ಷದಿಂದ ಮುಂದಿನ 3 ವರ್ಷಗಳಿಗೆ ಆಸ್ತಿ ತೆರಿಗೆ ಶೇಕಡ 15 ಹೆಚ್ಚಿಗೆ ಆಗಿರುವುದನ್ನು ಈಗಾಗಲೇ ತಿಳಿಸಲಾಗಿದೆ. 2005-06ರ ಸಬ್‍ರಿಜಿಸ್ಟಾರ್ಡ್ ಗೈಡೆನ್ಸ್ ವ್ಯಾಲಿವ್ಯೂ ಅಪ್‍ಲೋಡ್ ಮಾಡುವಾಗ ಆಗಿರುವ ಕೆಲವೊಂದು ವ್ಯತ್ಯಾಸಗಳನ್ನು ಸಹ ಸರಿಪಡಿಸಲಾಗಿದೆ. ಇದರಿಂದಾಗಿ ಕಡಿಮೆ ಗೈಡೆನ್ಸ್ ವ್ಯಾಲಿವ್ಯೂ ನಿಗದಿಯಾಗಿದ್ದ ಪ್ರದೇಶಗಳ ನಿವೇಶನದ ಮೌಲ್ಯ ಹೆಚ್ಚಾಗಲು ಕಾರಣವಾಗಿ ಸಹ ಕೆಲವೊಂದು ಕಟ್ಟಡಗಳಿಗೆ ಆಸ್ತಿ ತೆರಿಗೆ ಹೆಚ್ಚಿಗೆ ಆಗುತ್ತಿದೆ. ಆಸ್ತಿ ತೆರಿಗೆ ಈ ಕೆಳಕಂಡಂತೆ ಕಟ್ಟಡಕ್ಕೆ ಅನುಗುಣವಾಗಿ ನಿಗದಿ ಮಾಡಲಾಗುತ್ತದೆ ಎಂದು ಪೌರಾಯುಕ್ತ ಪಿ.ಶ್ರೀನಿವಾಸ ತಿಳಿಸಿದ್ದಾರೆ.ಕಟ್ಟಡ ಪರವಾನಿಗೆ ಹೊಂದಿರುವ, ಕಟ್ಟಡ ಪರವಾನಿಗೆ ನಿಯಮಗಳಿಗೆ ಬದ್ದವಾಗಿ ನಿರ್ಮಿಸಿರುವ ವಾಸ / ವಾಣಿಜ್ಯ / ಇತರ ಕಟ್ಟಡಗಳ ತೆರಿಗೆ ನಿಗದಿ ಕಟ್ಟಡ ಪರವಾನಿಗೆ ಹೊಂದಿರುವ/ಹೊಂದದೆ ಇರುವ ಅಥವಾ ಹೊಂದಿದ್ದಲ್ಲಿ ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಿರುವ ವಾಸ / ವಾಣಿಜ್ಯ / ಇತರ ಕಟ್ಟಡಗಳಿಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಸೆಕ್ಷನ್ 107 ರಂತೆ, ಅಧಿಕೃತವಲ್ಲದ ಆಸ್ತಿ ತೆರಿಗೆ ದಂಡ ರೂಪದಲ್ಲಿ ತೆರಿಗೆ ವಸೂಲಿ ಮಾಡಲು ಅವಕಾಶವಿದೆ.ಆಸ್ತಿ ತೆರಿಗೆಗೆ ಲೆಕ್ಕಾಚಾರ ಮಾಡುವಾಗ ಸರ್ಕಾರದ ಶೇಕಡ 5 ರಿಯಾಯಿತಿಗೆ ನೀಡಿದ ಕಾಲವಕಾಶದಲ್ಲಿ ಶೇಕಡ 5 ರಿಯಾಯಿತಿಯ, ಅವಕಾಶ ಸಿಗುತ್ತದೆ. ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಶೇಕಡ 5 ರಿಯಾಯಿತಿ ಲಭ್ಯವಾಗುವುದಿಲ್ಲ. ತೆರಿಗೆ ಸಹ ಮುನ್ಸಿಪಲ್ ಕಾಯಿದೆಯಂತೆ ದುಪಟ್ಟು ಆಗುತ್ತದೆ.

ಯಾವುದೇ ಕಟ್ಟಡಕ್ಕೆ ಆಸ್ತಿ ತೆರಿಗೆ ನಿಯಮ ಪ್ರಕಾರ 10 ವರ್ಷದವರೆಗೆ ಸವಕಳಿ ಸಿಗುವುದಿಲ್ಲ. ಈ ಪ್ರಕಾರ ಆನ್‍ಲೈನ್‍ನಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರವಾಗುತ್ತಿದೆ ಎಂಬ ಮಾಹಿತಿಯನ್ನು ತೆರಿಗೆ ಪಾವತಿದಾರರಿಗೆ ತಿಳಿಸಲಾಗಿದೆ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದ್ದಾರೆ.