ಸೋಮವಾರಪೇಟೆ,ಜೂ.10: ಸೋಮವಾರಪೇಟೆ ಪಟ್ಟಣ ಸಮೀಪದ ಕಕ್ಕೆಹೊಳೆ, ಕಾರೆಕೊಪ್ಪ ಹಾಗೂ ಮಾದಾಪುರದಲ್ಲಿ ಪ್ರತ್ಯೇಕ ವಾಹನಗಳ ಅವಘಡ ಸಂಭವಿಸಿದ್ದು, ಚಾಲಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಶಾಲನಗರ ರಸ್ತೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಸಿಮೆಂಟ್ ಇಟ್ಟಿಗೆಗಳನ್ನು ಸಾಗಾಟಗೊಳಿಸುತ್ತಿದ್ದ ಪಿಕ್ ಅಪ್ ವಾಹನ ಇಲ್ಲಿನ ಮುತ್ತಪ್ಪ ಮತ್ತು ಅಯ್ಯಪ್ಪ ದೇವಾಲಯದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ.
ಮತ್ತೊಂದು ಪ್ರಕರಣದಲ್ಲಿ ಮಾದಾಪುರದ ವರ್ಕ್ ಶಾಪ್ ಬಳಿಯಲ್ಲಿ ಮಾರುತಿ 800 ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಇಳಿದಿದೆ.ಕಾರಿನ ಮುಂಭಾಗ ನೀರಿನಲ್ಲಿ ಮುಳುಗಿದ್ದು, ಯಾವದೇ ಅಪಾಯ ವಿಲ್ಲದೆ ಚಾಲಕ ಪಾರಾಗಿದ್ದಾನೆ. ಸ್ಥಳೀಯರ ನೆರವಿನೊಂದಿಗೆ ಕಾರನ್ನು ಹೊಳೆಯುವ ಮೇಲೆತ್ತಲಾಯಿತು.
ಕುಶಾಲನಗರ-ಸೋಮವಾರಪೇಟೆ ಮುಖ್ಯ ರಸ್ತೆಯ ಕಾರೆಕೊಪ್ಪ ಬಳಿಯಲ್ಲಿ ಕೊರಿಯರ್ ಸಾಗಾಟಗೊಳಿಸುತ್ತಿದ್ದ ಪಿಕ್ ಅಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.