ಕುಶಾಲನಗರ, ಜೂ. 10: ಕುಶಾಲನಗರದಲ್ಲಿ ವಿದ್ಯಾರ್ಥಿಯೊಬ್ಬ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಳ್ಳುಸೋಗೆ ಗ್ರಾಮದ ನಿವಾಸಿ ಕುಮಾರಸ್ವಾಮಿ ಎಂಬವರ ಮಗ ಕೌಶಿಕ್ (23) ಎಂಬಾತ ಈ ತಿಂಗಳ 8 ರಂದು ಬೈಕ್ (ಕೆಎ.12.ಇಎ.5521) ನಲ್ಲಿ ಬಜಾಜ್ ಆಟೋ ಶೋರೂಂಗೆ ಹೋದವನು ರಾತ್ರಿಯಾದರೂ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ತಂದೆ ದೂರು ನೀಡಿದ್ದಾರೆ.

ಈ ಯುವಕನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲಿ ಕುಶಾಲನಗರ ಪಟ್ಟಣ ಠಾಣೆ 08276-274333 ಅಥವಾ ಠಾಣಾಧಿಕಾರಿ 9480804951 ಅಥವಾ ಕಂಟ್ರೋಲ್ ರೂಂ 08272-228330 ಗೆ ಮಾಹಿತಿ ನೀಡುವಂತೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.